Slide
Slide
Slide
previous arrow
next arrow

‘ಜೀವ ಉಳಿಸುವ ಕಳೆ-ಕಂಟಿ-ಗಿಡ-ಮರ-ಬಳ್ಳಿಗಳು’ ಪುಸ್ತಕ ಬಿಡುಗಡೆ

300x250 AD

ಹೊನ್ನಾವರ: ಭೂಮಿ ಜಾನಪದ ಪ್ರಕಾಶನ ಮತ್ತು ಪಿ.ಎಂ. ಹೈಸ್ಕೊಲ್ ಇದರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕದ ಖ್ಯಾತ ಜನಪದ ಲೇಖಕಿ ಶಾಂತಿ ನಾಯಕರವರು ಕರಾವಳಿ ಜನಪದಲ್ಲಿ ಬಳಸುವ ಸಸ್ಯಗಳ ಬಗ್ಗೆ ರಚಿಸಿರುವ “ಜೀವ ಉಳಿಸುವ ಕಳೆ ಕಂಟಿ ಗಿಡ ಮರ ಬಳ್ಳಿಗಳು” ಎಂಬ ಪುಸ್ತಕದ ಬಿಡುಗಡೆ ಸಮಾರಂಭವು ಅಂಕೋಲಾದ ಪಿ.ಎಂ. ಹೈಸ್ಕೂಲ್ ನಲ್ಲಿ ಸೋಮವಾರ ನೆರೆವೇರಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕುಮಟಾದ ಖ್ಯಾತ ಸಸ್ಯ ಪರಿಸರ ಶಾಸ್ತ್ರಜ್ಞ ಡಾ. ಎಂಡಿ ಸುಭಾಶ ಚಂದ್ರನ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರ್ನಾಟದ ಖ್ಯಾತ ಸಸ್ಯಶಾಸ್ತ್ರಜ್ಞರಾದ ಡಾ. ಸತ್ಯನಾರಾಯಣ ಭಟ್ಟ ಹಾಗೂ ಪಿ.ಎಂ ಹೈಸ್ಕೂಲ್ ಮುಖ್ಯ ಅಧ್ಯಾಪಕರಾದ ಚಂದ್ರಶೇಖರ ಉಪಸ್ಥಿತರಿದ್ದರು.

300x250 AD

ಪುಸ್ತಕದ ಬಿಡುಗಡೆಯನ್ನು ಕುಮಟಾ ಮೂರೂರುನವರಾದ ನಿವೃತ್ತ ಸಸ್ಯ ಶಾಸ್ತ್ರ ಪ್ರಾಧ್ಯಾಪಕ ಡಾ. ಜಿ.ಆರ್ ಹೆಗಡೆ ನೆರವೇರಿಸಿದರು. ಪುಸ್ತಕದ ಪರಿಚಯವನ್ನು ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕಿ ಪ್ರೊ ಗೀತಾ ನಾಯಕ,ಭಾರತಿಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರ ಕುಮಟಾದ ಶ್ರೀಮತಿ ಗಾಯತ್ರಿ ನಾಯ್ಕ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ನಿಕಟಪೂರ್ವ ಸದಸ್ಯ ಡಾ. ಪ್ರಕಾಶ ಮೇಸ್ತ, ಜೀವಶಾಸ್ತ ಪ್ರಾಧ್ಯಾಪಕಿ ಶ್ರೀಮತಿ ಭಾರತಿ ಬಿ. ನಾಯಕರವರುಗಳು ಮಾಡಿದರು. ಸುಮಾರು 265 ಪುಟಗಳನ್ನು ಹೊಂದಿದ ಸದರಿ ಪುಸ್ತಕ ಸ್ಥಳೀಯ 70 ಸಸ್ಯಗಳ ಜಾನಪದ ಔಷಧಿ ಬಗ್ಗೆ ವಿವರಗಳ ಸಂಗ್ರಹವಿರುವ ಸದರ ಪುಸ್ತಕ ಸಭಿಕರಿಗೆ ಮತ್ತು ಓದುಗರ ಗಮನ ಸೆಳೆಯಿತು. ದಿವಂಗತ ವಿಶಾ ಬಾಯಿ ಜಿ.ನಾಯಕ ಹಿರೆಗುತ್ತಿ ಇವರ ನೆನಪಿನಲ್ಲಿ ಶಾಂತಿ ನಾಯಕರ ಕೃತಿ ಲೋಕಾರ್ಪಣೆಯಾಯಿತು. ಸಮಾರಂಭದಲ್ಲಿ ಸಾಹಿತಿಗಳಾದ ಡಾ. .ಎನ್. ಆರ್. ನಾಯಕ, ಡಾ. ವಿ. ಎನ್. ನಾಯಕ, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top