ಅಂಕೋಲಾ: ಪಟ್ಟಣದ ಮೀನು ಮಾರುಕಟ್ಟೆಯ ಬಳಿ ಕರೆಂಟ್ ಶಾಕ್ ತಾಗಿ ಮಂಗವೊಂದು ಮೃತಪಟ್ಟ ಘಟನೆ ನಡೆದಿದೆ.
ಮಂಗವೊಂದು ಬಹುಮಹಡಿ ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಜಿಗಿಯುವಾಗ ಆಕಸ್ಮಿಕವಾಗಿ ಎಲೆಕ್ಟ್ರಿಕ್ ಕಂಬದ ಮೇನ್ ಲೈನ್ ತಂತಿ ತಗುಲಿದ ಪರಿಣಾಮ ಮಂಗವು ತೀವೃ ಆಘಾತಕ್ಕೆ ಒಳಗಾಗಿ ನೆಲಕ್ಕೆ ಬಿದ್ದಿದೆ. ಕೂಡಲೇ ಸಾರ್ವಜನಿಕರು ಬದುಕಿಸಲು ಪ್ರಯತ್ನಿಸಿದರಾದರೂ ಫಲಕಾರಿಯಾಗದೆ ಕೆಲವೇ ಕ್ಷಣದಲ್ಲಿ ಮೃತಪಟ್ಟಿತು. ಅಲ್ಲಿ ನೆರೆದಿದ್ದ ನೂರಾರು ಜನ ಮೃತಪಟ್ಟ ವಾನರಕ್ಕೆ ಹೂವಿನ ಹಾರ ಕುಂಕುಮ ಹಾಕಿ ನಮಸ್ಕರಿಸಿದರು. ನಂತರ ಪುರಸಭೆಯ ವಾಹನದಲ್ಲಿ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕೆ ಸಾಗಿಸಲಾಯಿತು. ಮೃತಪಟ್ಟಿದ್ದು ವಾನರ ಆದರೂ ಜನರು ಮನುಷ್ಯನಷ್ಟೇ ಗೌರವ ಸಲ್ಲಿಸಿದ್ದು ವಾನರನ ಮೇಲಿರುವ ಭಕ್ತಿಯನ್ನು ತೋರಿಸುತ್ತಿತ್ತು.