ಶಿರಸಿ: ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಸ್ತಾರ ನ್ಯೂಸ್ ಚಾನೆಲ್ ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಾಲೆಯ ಬಗ್ಗೆ ಅಭಿಮಾನ ಗೌರವ ವ್ಯಕ್ತಪಡಿಸಿದರು. ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರತಿಯೊಬ್ಬ ಪಾಲಕರೂ ಸಂಸ್ಕಾರ ಸಿಗುವ ಶಾಲೆಗೆ ಸೇರಿಸುವುದು ಮುಖ್ಯ.ಬಾಲ್ಯದಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣ ಉತ್ತಮ.ಅಲ್ಲದೇ ಮಕ್ಕಳನ್ನು ಪಾಲಕರು ಅಗತ್ಯಕ್ಕಿಂತ ಜಾಸ್ತಿ ಕಾಳಜಿ ತೋರಿದರೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮಾರಕವಾಗಬಹುದು ಎಂದು ಹೇಳುತ್ತಾ, ತಮ್ಮ ಬಾಲ್ಯದ ದಿನಗಳಲ್ಲಿ ತಾವು ಬೆಟ್ಟ-ಗುಡ್ಡ ತಿರುಗಿ ಬೆಳೆದ ಬಗ್ಗೆ ನೆನಪಿಸಿಕೊಂಡರು.ಅಲ್ಲದೇ, ಶಿರಸಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪಾಲಕರು ತಮ್ಮ ಮಕ್ಕಳನ್ನು ಪಿ.ಯು.ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯಲು ದೂರ ದೂರ ಊರುಗಳಿಗೆ ಕಳುಹಿಸುವ ಅನಿವಾರ್ಯತೆ ಇನ್ನಿಲ್ಲ.ಲಯನ್ಸ್ ಎಜ್ಯುಕೇಶನ್ ಸೊಸೈಟಿಯು ಬೆಂಗಳೂರಿನ ಬೇಸ್ ಜೊತೆ ಸೇರಿ ಇಂಟಿಗ್ರೇಟೆಡ್ ಕಾಲೇಜನ್ನು ಶಿರಸಿಯಲ್ಲೇ ಪ್ರಥಮ ಬಾರಿಗೆ ಆರಂಭಿಸಿದ್ದು ಎಷ್ಟೋ ವಿದ್ಯಾರ್ಥಿಗಳಿಗೆ ತಮ್ಮ ಊರಿನಲ್ಲೇ ಒಳ್ಳೆಯ ಶಿಕ್ಷಣ ಪಡೆಯಲು ಸಹಾಯವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೊಫೆಸರ್ ರವಿ ನಾಯಕ್ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂತ್ರ ಘೋಷ ಮತ್ತು ಪ್ರಾರ್ಥನಾ ಗೀತೆ, ದೀಪ ಬೆಳಗಿಸಿ ಉದ್ಘಾಟಿಸುವುದರೊಂದಿಗೆ ಸಭಾ ಕಾರ್ಯಕ್ರಮದ ಆರಂಭವಾಯಿತು.ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಎಂ ಜೆ ಎಫ್ ಲ.ಪ್ರಭಾಕರ್ ಹೆಗಡೆ, ಉಪಾಧ್ಯಕ್ಷರಾದ ಎಂ ಜೆ ಎಫ್ ಲ.ಕೆ.ಬಿ.ಲೋಕೇಶ್ ಹೆಗಡೆ,ಕೋಶಾಧ್ಯಕ್ಷರಾದ ಎಂ.ಜೆ.ಎಫ್. ಲಯನ್ ಉದಯ್ ಸ್ವಾದಿ , ಸಹಕಾರ್ಯದರ್ಶಿಗಳಾದ ಲಯನ್ ವಿನಯ ಹೆಗಡೆ ಬಸವನ ಕಟ್ಟೆ, ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿಯು ಸದಸ್ಯರಾದ ಎಂ ಜೆ ಎಫ್ ಲ. ತ್ರಿವಿಕ್ರಮ್ ಪಟವರ್ಧನ್,ಲಯನ್ ಶ್ಯಾಮಸುಂದರ ಭಟ್, ಎಂ ಎಂ.ಜೆ.ಎಫ್. ಲಯನ್ ಚಂದ್ರಶೇಖರ್ ಹೆಗಡೆ, , ಶಿರಸಿ ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ಲ.ಜ್ಯೋತಿ ಅಶ್ವತ್ಥ ಹೆಗಡೆ
ಶಿರಸಿ ಲಯನ್ಸ್ ಶಾಲಾ ಮತ್ತು ಕಾಲೇಜು ಸಮೂಹದ ಪ್ರಾಚಾರ್ಯ ಶಶಾಂಕ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಂ.ಜೆ.ಎಫ್. ಲಯನ್ ಶ್ರೀಕಾಂತ್ ಹೆಗಡೆ, ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ಸಹ ಕಾರ್ಯದರ್ಶಿಗಳಾದ ಲಯನ್ ವಿನಯ್ ಹೆಗಡೆ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು. ಅತಿಥಿಗಳಿಗೆ ಗೌರವ ಸಮರ್ಪಣೆ,ವಿದ್ಯಾರ್ಥಿಗಳ ಪ್ರತಿಭೆಗೆ ದ್ಯೋತಕವಾದ ವಿದ್ಯಾರ್ಥಿಗಳ ಹಸ್ತ ಪ್ರತಿ ಅಂಕುರ ಬಿಡುಗಡೆ, ವಿದ್ಯಾರ್ಥಿಗಳಿಗೆ ಹೌಸ್ ಚಾಂಪಿಯನ್ ಶಿಪ್ ಬಹುಮಾನ ವಿತರಣೆ ಈ ಎಲ್ಲಾ ಸಮಾರಂಭಗಳ ನಂತರ ವಿದ್ಯಾರ್ಥಿಗಳ ಮನೋರಂಜನೆ ಕಾರ್ಯಕ್ರಮ ಆರಂಭವಾಯಿತು.
ನರ್ಸರಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭರತನಾಟ್ಯ,ಯಕ್ಷನೃತ್ಯ,ಭಕ್ತ ಪ್ರಹ್ಲಾದ, ಏಕಲವ್ಯ, ಸಮುದ್ರ ಮಂಥನ, ಶಿವ, ಗಣೇಶ ,ದೇವಿ ನೃತ್ಯದಂತಹ ಪೌರಾಣಿಕ ಹಿನ್ನೆಲೆ ಹೊಂದಿರುವ ರೂಪಕಗಳು, ನೃತ್ಯ ಗಳು, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ, ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಹೊಂದಿರುವ ವೈಚಾರಿಕ ನೃತ್ಯ,ದೇಶ ಪ್ರೇಮ ಸಾರುವ ನೃತ್ಯ ಪ್ರದರ್ಶನ ಹೀಗೆ ವಿವಿಧ ರೀತಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ರಂಜಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಶಿರಸಿಯ ಸಾಂಪ್ರದಾಯಿಕ ಕಲೆ ಬೇಡರ ವೇಷವನ್ನು ಪ್ರದರ್ಶಿಸಲಾಯಿತು.ಶಾಲಾ ಆಡಳಿತ ಮಂಡಳಿಯವರ ಸಹಕಾರ,ವಿದ್ಯಾರ್ಥಿಗಳ,ಪಾಲಕರ, ಪ್ರಾಂಶುಪಾಲರ, ಶಿಕ್ಷಕರ,ಶಿಕ್ಷಕೇತರ ಸಿಬ್ಬಂದಿಗಳ ಒಗ್ಗಟ್ಟಿನ ಪರಿಶ್ರಮದಿಂದ ಅಚ್ಚುಕಟ್ಟಾಗಿ ಶಾಲೆಯ ವಾರ್ಷಿಕೋತ್ಸವ ನೆರವೇರಿತು.