ಶಿರಸಿ: ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಉದಯರಾಗ ನವ ಸಂಸ್ಕೃತಿಯ ಅನಾವರಣ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಎಂಇಎಸ್ ಜಂಟಿ ಕಾರ್ಯದರ್ಶಿ ಕೆ.ಬಿ.ಲೋಕೇಶ್ ಹೆಗಡೆ ಉಪಸ್ಥಿತರಿದ್ದು, ಮಾತನಾಡಿ, ಸಂಗೀತ ಮನೋಲ್ಲಾಸವನ್ನು ಒದಗಿಸುತ್ತದೆ. ತಾಳ್ಮೆ ಮನೋಭಾವವನ್ನು ನಮ್ಮಲ್ಲಿ ಮೂಡಿಸುತ್ತದೆ. ದೇಹಕ್ಕೆ ಆಯಾಸವನ್ನು ನೀಗಿಸಿ ಆರಾಮದಾಯಕವಾಗಿಸುವ ಶಕ್ತಿ ಸಂಗೀತಕ್ಕಿದೆ ಎಂದರು. ವಾರಣಾಸಿಯ ವಿದುಷಿ ತೇಜಸ್ವಿನಿ ವೆರ್ಣೇಕರ್ ಅಲೈಯ್ಯ ಬಿಲಾವಲ್ ರಾಗವನ್ನು ಸುಶ್ರಾವ್ಯವಾಗಿ ಹಾಡಿ ನೆರೆದವರನ್ನು ರಂಜಿಸಿದರು. ರಾಮನಾಥ ಭಟ್ ತಬಲಾ ಸಾತ್ ನೀಡಿದರೆ, ಪ್ರಕಾಶ್ ಹೆಗಡೆ ಹಾರ್ಮೋನಿಯಂ ಸಾತ್ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ, ಸಂಗೀತ ವಿಭಾಗ ಮುಖ್ಯಸ್ಥ ಕೃಷ್ಣಮೂರ್ತಿ ಭಟ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.