ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಕರ್ನಾಟಕ ರಾಜ್ಯ ಚದುರಂಗ ಸಂಘದ ಶುಭ ಚಿಹ್ನೆಯೊಂದಿಗೆ ಜ.28, ಭಾನುವಾರ ಮುಂಜಾನೆ 9 ಗಂಟೆಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ನಗರದ ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಪಂದ್ಯಾವಳಿಯು ಒಟ್ಟೂ ರೂ. 76,000/- ನಗದು ಹಾಗೂ 31 ಟ್ರೋಫಿಗಳನ್ನೊಳಗೊಂಡಿರುತ್ತದೆ. ವಯೋಮಿತಿ 16, 14, 12, 10, 8 ಹಾಗೂ ಉತ್ತಮ ಕಿರಿಯ ಆಟಗಾರ ಪ್ರಶಸ್ತಿ, ಉತ್ತಮ ಮಹಿಳಾ ಆಟಗಾರ್ತಿ ಪ್ರಸ್ತಿಗಳು, ವಯೋಮಿತಿ 45, 50, 55, 60 ವರ್ಷ ಮೇಲ್ಪಟ್ಟ ಪ್ರಶಸ್ತಿಗಳು ಹಾಗೂ ಉತ್ತಮ ಅಂಗವಿಕಲ ಪ್ರಶಸ್ತಿಗಳನ್ನೂ ಸಹ ಪಂದ್ಯಾವಳಿಯು ಒಳಗೊಂಡಿರುತ್ತದೆ. ಪ್ರವೇಶ ಶುಲ್ಕ ರೂ. 500 ಮಾತ್ರ ಇರುವುದು. ಪಂದ್ಯಾವಳಿಯು ಫೀಡೆ ಸ್ವಸ್ ಮಾದರಿಯಲ್ಲಿ 15 ನಿಮಿಷ ಮತ್ತು 5 ಸೆಕೆಂಡ್ ಪ್ರತಿ ನಡೆಗೆ ಹೆಚ್ಚುವರಿ ಸೇರ್ಪಡೆಯಾಗಿ ಜರುಗಲಿದೆ.
ಆಸಕ್ತ ಚದುರಂಗ ಆಟಗಾರರು ಜ.27ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸುವುದು ಕಡ್ಡಾಯವಾಗಿದೆ. ಆಟಗಾರರು ತಮ್ಮ ನೊಂದಣಿಯನ್ನು ನವೀನ ಹೆಗಡೆ ವಾಟ್ಸ್ ಆಪ್ ನಂ. tel:+919480621062 ಕ್ಕೆ ಜಿ-ಪೇ ಅಥವಾ ಫೋನ ಪೇ ಮುಖಾಂತರ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನವೀನ ಹೆಗಡೆ ಅಥವಾ ರವಿ ಹೆಗಡೆ ಮೊ : tel:+918073230690 ಇವರನ್ನು ಸಂಪರ್ಕಿಸಬಹುದಾಗಿದೆ.