ಜೋಯಿಡಾ : ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿ ಜಖಂಗೊಂಡ ಘಟನೆ ಜೋಯಿಡಾ ತಾಲೂಕಿನ ಅನ್ಮೋಡಾದ ಹತ್ತಿರ ನಡೆದಿದೆ.
ಹುಬ್ಬಳ್ಳಿಯಿಂದ ಗೋವಾಕ್ಕೆ ಕಚ್ಚಾ ವಸ್ತುಗಳನ್ನು ಹೇರಿಕೊಂಡು ಹೋಗುತ್ತಿದ್ದ ಕೆಎ:32, ಸಿ : 3834 ಸಂಖ್ಯೆಯ ಲಾರಿಯೊಂದು ಅತಿಯಾದ ವೇಗ ಹಾಗೂ ಚಾಲಕನ ನಿರ್ಲಕ್ಷ್ಯದಿಂದಾಗಿ ಅನ್ಮೋಡಾದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಲಾರಿ ಜಖಂಗೊಂಡಿದೆ.
ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.