ಶಿರಸಿ: ಶಿರಸಿ ಲಯನ್ಸ್ ಕ್ಲಬ್‌ಗೆ ಮಲ್ಟಿಪಲ್ ಕೌನ್ಸಿಲ್ ಚೇರಪರ್ಸನ್ ಲಯನ್ ಬಿ. ಎಸ್. ರಾಜಶೇಖರಯ್ಯ ಹಾಗೂ ಅವರ ಧರ್ಮಪತ್ನಿ ಲಯನ್ ಪ್ರೇಮಾ ರಾಜಶೇಖರಯ್ಯ ಅಧಿಕೃತ ಭೇಟಿ ನೀಡಿದರು.
ಲಯನ್ಸ್ ಶಾಲಾ ಆವರಣದಲ್ಲಿ ನಿರ್ಮಿಸಲಾದ ಮಳೆ ನೀರು ಕೊಯ್ಲಿನ 2 ನೇ ಘಟಕವನ್ನು ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಅಶೋಕ ಹೆಗಡೆ ಸ್ವಾಗತಿಸಿದರು. ಡಾ. ಭಾಸ್ಕರ ಸ್ವಾದಿ ಮೆಮೋರಿಯಲ್ ಪಿ.ಯು.ಕಾಲೇಜು ಪ್ರಾರಂಭದವರೆಗಿನ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.
ಲಯನ್ ಬಿ.ಎಸ್. ರಾಜಶೇಖರಯ್ಯ ಮಾತನಾಡಿ ಲಯನ್ಸ ಕ್ಲಬ್ ಸಾಧನೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಅವರು ಲಯನ್ಸ ಕ್ಲಬ್ ಅಧ್ಯಕ್ಷರಾದ ಲಯನ್ ಅಶೋಕ ಹೆಗಡೆ ಇವರಿಗೆ ಮಲ್ಟಿಪಲ್ ಡಿಸ್ಟ್ರಿಕ್ಟ್ ಮೆಡಲ್ ಮತ್ತು ಇಂಟರ್ನ್ಯಾಷನಲ್ ಪಿನ್ ನೀಡಿ ಸನ್ಮಾನಿಸಿದರು. ಲಯನ್ಸ ಕ್ಲಬ್ ಸಿರಸಿಯ ಪಧಾದಿಕಾರಿಗಳಿಗೆ, ಲಯನ್ ಸದಸ್ಯರಿಗೆ ಸನ್ಮಾನಿಸಿದರು. ನಂತರ ಲಯನ್ಸ ಯುತ್ ಫೆಸ್ಟಿವಲ್ 1 ನೇ ಭಾಗವಾಗಿ ಆಯೋಜಿಸಲಾದ “ಮಾರುತಿ ಪ್ರತಾಪ” ಯಕ್ಷಗಾನವನ್ನು ಉದ್ಘಾಟಿಸಿದರು.
ಸಭೆಯಲ್ಲಿ ಲಯನ್ ಡಾ.ರವಿ ಹೆಗಡೆ, ಹೂವಿನಮನೆ, ಲಯನ್ ಗಣಪತಿ ನಾಯಕ, ಲಯನ್ ಐಶ್ವರ್ಯ ಮಾಸೂರಕರ್, ಲಯನ್ ವಿನಯಾ ಹೆಗಡೆ, ಲಯನ್ ಆರ್. ಎಚ್. ನಾಯಕ, ಲಯನ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಪ್ರಭಾಕರ ಹೆಗಡೆ, ಲಯನ್ ಶಶಿನಂದ ಮಾಸೂರಕರ್ ಹಾಗೂ ಶಿರಸಿ ಲಯನ್ಸ ಕ್ಲಬ್ ಸದಸ್ಯರು ಹಾಜರಿದ್ದರು.