ಹೊನ್ನಾವರ: ಶಾಸಕ ದಿನಕರ ಶೆಟ್ಟಿ ಸೋಮವಾರ ಪಟ್ಟಣದ ಉಪನೋಂದಣಾಧಿಕಾರಿ ಹಾಗೂ ವಿವಾಹಗಳ ರಜಿಸ್ಟ್ರಾರರವರ ಕಚೇರಿಗೆ ಭೇಟಿ ನೀಡಿದರು. ಅಲ್ಲಿನ ಸಿಬ್ಬಂದಿಗಳ ಕಾರ್ಯವೈಖರಿಯನ್ನು ವೀಕ್ಷಿಸಿದ ಶಾಸಕರು ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ವಿಳಂಬಮಾಡದೆ ಅಗತ್ಯವಿರುವ ಸೇವೆ ಒದಗಿಸುವಂತೆ ಆದೇಶಿಸಿದರು.
ಸಬ್ ರಜಿಸ್ಟ್ರಾರ್ ಶಿವಾನಂದ ಪಾಟೀಲ, ಹೊನ್ನಾವರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ ಭಂಡಾರಿ, ಪ್ರಮುಖರಾದ ಸುರೇಶ ಹರಿಕಾಂತ, ಶಿವರಾಜ್ ಮೇಸ್ತ, ವಿಜು ಕಾಮತ್, ಯೋಗೇಶ್ ಮೇಸ್ತ, ರವಿ ನಾಯ್ಕ, ಎಮ್.ಎಸ್. ಹೆಗಡೆ, ಉಲ್ಲಾಸ ನಾಯ್ಕ, ಗಣೇಶ ಸಾರಂಗ ಹಾಗೂ ಇತರರು ಇದ್ದರು.