Slide
Slide
Slide
previous arrow
next arrow

ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ: ಉರಗ ಪ್ರೇಮಿ ರಜಾಕ್ ಶಾನಿಂದ ರಕ್ಷಣೆ

300x250 AD

ದಾಂಡೇಲಿ : ನಗರದ ಬೈಲುಪಾರಿನ ಮನೆಂದರ ಆಭರಣದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಒಂದು ಪ್ರತ್ಯಕ್ಷವಾಗಿ ಆತಂಕದ ವಾತಾವರಣ ನಿರ್ಮಿಸಿದ ಘಟನೆ ನಡೆದಿದೆ.

ಬೈಲುಪಾರಿನ‌ ನಿವಾಸಿ ಹಾಗೂ ಉಪ ವಲಯಾರಣ್ಯಾಧಿಕಾರಿ ರಾಮು ಗೌಡ ಅವರು ವಾಸ್ತವ್ಯವಿರುವ ಅರಣ್ಯ ವಸತಿ ಗೃಹದ ಆಭರಣದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ. ಹಾವು ಕಂಡ ತಕ್ಷಣವೇ ನಗರದ ಉರಗ ಪ್ರೇಮಿ ರಜಾಕ್ ಶಾ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ರಜಾಕ್ ಶಾ ಅವರು ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ.

300x250 AD

ಕಳೆದ ಅನೇಕ ವರ್ಷಗಳಿಂದ ನಗರ ಹಾಗೂ ನಗರದ ಸುತ್ತಮುತ್ತಲ ಜನವಸತಿ ಪ್ರದೇಶದಲ್ಲಿ ಹಾವುಗಳು ಪ್ರತ್ಯಕ್ಷವಾದ ಸಂದರ್ಭದಲ್ಲಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಿಟ್ಟು ಬರುವ ಮೂಲಕ ರಜಾಕ್ ಶಾ ಅವರು ವನ್ಯ ಕಾಳಜಿಯನ್ನು ಮೆರೆಯುತ್ತಿದ್ದಾರೆ.

Share This
300x250 AD
300x250 AD
300x250 AD
Back to top