Slide
Slide
Slide
previous arrow
next arrow

ಸಾವಿರಾರು ಪಾಪ ತೊಳೆದುಕೊಳ್ಳಲು ಭಗವತ್ ನಾಮ ಸಂಕೀರ್ತನೆ ಸಾಕು: ಹುಸೇನ್ ಸಾಬ್ ಕನಕಗಿರಿ

300x250 AD

ಹೊನ್ನಾವರ : ಗುಣವಂತೆಯ ಶಂಭುಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತವಾಗಿ ಜಿ.ಎಸ್.ಹೆಗಡೆಯವರ ಸಂಚಾಲಕತ್ವದ ಸಪ್ತಕ’ ಸಂಸ್ಥೆಯು ಸನ್ಮಾನ ಮತ್ತು ಭಜನಾ ಕಾರ್ಯಕ್ರಮ ಆಯೋಜಿಸಿತ್ತು.

ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ, ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ಭಕ್ತಿಗೀತೆಯ ಗಾಯಕ ಕನಕಗಿರಿಯ ಬಿ ಹುಸೇನ್ ಸಾಬ್ ಒಂದು ಗಿಡದಲ್ಲಿ ಸಾವಿರಾರು ಕಾಗೆಗಳು ಕುಳಿತಿದ್ದರೆ, ಆ ಸಾವಿರಾರು ಕಾಗೆಯನ್ನು ಓಡಿಸಲು ಸಾವಿರಾರು ಕಲ್ಲುಗಳನ್ನು ಎಸೆಯಬೇಕಿಲ್ಲ. ಒಂದು ಕಲ್ಲು ಎಸೆದರು ಸಾಕು, ಆ ಸಾವಿರಾರು ಕಾಗೆಗಳು ಹಾರಿಹೋಗುತ್ತದೆ. ಹಾಗೆ ನಮ್ಮೊಳಗಿನ ಸಾವಿರಾರು ಪಾಪಗಳನ್ನು ಕಳೆದುಕೊಳ್ಳುವುದಕ್ಕೆ ಒಂದು ಭಗವತ್ ನಾಮ ಸಂಕೀರ್ತನೆ ಸಾಕು. ಸಾವಿರಾರು ಪಾಪಗಳು ತೊಳೆದು ಹೋಗುತ್ತದೆ. ಇದು ಭಜನೆಯಲ್ಲಿ ಇರುವ ತಾಕತ್ತು. ಸಂಗೀತಕ್ಕೆ ಮೊಟ್ಟಮೊದಲು ಇರಬೇಕಾದ ಗುಣ ಎಂದರೆ ಅಪ್ಪಿಕೊಳ್ಳುವುದು ಹಾಗೆ ಅರ್ಪಿಸಿಕೊಳ್ಳುವುದು. ಇಂದು ಸ್ವೀಕರಿಸಿದ ಸನ್ಮಾನ ಭಗವಂತನ ಅನುಗ್ರಹ ಎಂದರು.

ಇದೇ ಸಂದರ್ಭದಲ್ಲಿ ಖ್ಯಾತ ಭಜನಾ ಹಾಗೂ ಹಾರ್ಮೋನಿಮ್ ಕಲಾವಿದ ಎನ್. ಎಸ್. ಹೆಗಡೆ ಕೆರೆಮನೆ ಅವರನ್ನು ಸಪ್ತಕ ಸನ್ಮಾನಿಸಿತು. ಸನ್ಮಾನ ಸ್ವೀಕರಿಸಿದ ಎನ್.ಎಸ್.ಹೆಗಡೆಯವರು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದ್ವಾಂಸ ಎಸ್. ಶಂಭು ಭಟ್ಟರವರು ಮಾತನಾಡಿ ಸಂಗೀತ ನಮ್ಮ ಪರಂಪರೆಯ ಸಂಕೇತವಾಗಿದೆ. ಇದನ್ನು ನಿರಂತರವಾಗಿ ಮುನ್ನೆಡೆಸುತ್ತಿರುವ ಸಪ್ತಕ ಸಂಸ್ಥೆಯನ್ನು ಶ್ಲಾಘಿಸಿದರು.

300x250 AD

ಅಧ್ಯಕ್ಷರಾದ ದೇವಸ್ಥಾನದ ಧರ್ಮದರ್ಶಿಗಳಾದ ನರಸಿಂಹಮೂರ್ತಿ ಪಂಡಿತ ಮಾತನಾಡಿ ಜೀರ್ಣೋದ್ಧಾರದ ಈ ಶುಭ ಅವಸರದಲ್ಲಿ ಅಂತರರಾಷ್ಟ್ರೀಯ ಕಲಾವಿದರಿಂದ ಭಜನಾ ಆರಾಧನೆಯಾಗುತ್ತಿರುವುದು ಊರಿನ ಕಲಾಭಿಮಾನಿಗಳಿಗೆ ಸಂತೋಷ ತಂದಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಹುಸೇನ ಸಾಬ್ ರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದತ್ತು ನಾಯ್ಕ,ಗುಣವಂತೆ, ವಿಷ್ಣು ಹೆಗಡೆ ನಿಲೇಕೇರಿ ಮತ್ತು ಪಾಂಡು ಭಟ್ಟ, ಮುಗಳಿ ಇವರನ್ನು ಸಪ್ತಕದ ವತಿಯಿಂದ ಗೌರವ ಪುರಸ್ಕಾರ ನೀಡಲಾಯಿತು.

ಸಪ್ತಕದ ಸಂಚಾಲಕರಾಗಿರುವ ಜಿ.ಎಸ್.ಹೆಗಡೆಯವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಎಲ್.ಎಮ್.ಹೆಗಡೆ ಕೆರೆಮನೆ ಇವರು ಅತಿಥಿ ಅಭ್ಯಾಗತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಎಮ್.ಎಸ್.ಹೆಗಡೆ ಗುಣವಂತೆ ಇವರು ವಂದಿಸಿದರು. ಸಭಾಕಾರ್ಯಕ್ರಮದ ನಂತರ ಹುಸೇನ ಸಾಬ್ ಅವರಿಂದ ದಾಸರ ಪದಗಳ ಮೂಲಕ ಭಜನಾ ಕಾರ್ಯಕ್ರಮ ನಡೆಯಿತು.

Share This
300x250 AD
300x250 AD
300x250 AD
Back to top