Slide
Slide
Slide
previous arrow
next arrow

ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ‘ಸರಸ್ವತಿ ಸಂಭ್ರಮ’ ಯಶಸ್ವಿ

300x250 AD

ಕುಮಟಾ : ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ದ್ವೈವಾರ್ಷಿಕವಾಗಿ ಜರುಗುವ ಪಾಲಕರ, ಶಿಕ್ಷಕರ, ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ‘ಸರಸ್ವತಿ ಸಂಭ್ರಮ’ ಕಾರ್ಯಕ್ರಮವು ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಕಾರ್ಯಕ್ರಮದ ಸವಿ ಸವಿದರು.

ಸಂಸ್ಥೆಯ ಸಮೂಹ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗೈದಿರುವ ಸಾಧನೆಗಳನ್ನು ಗುರುತಿಸಿ ಗೌರವಿಸುವ ಮೂಲಕ ನಡೆದ ಸಭಾ ಕಾರ್ಯಕ್ರಮವನ್ನು ಪಿ.ಯು ಶಿಕ್ಷಣ ಇಲಾಖೆಯ ನಿವೃತ್ತ ಜಂಟೀ ನಿರ್ದೇಶಕ ದೇವಾನಂದ ಗಾಂವ್ಕರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಕೊಂಕಣ ಟ್ರಸ್ಟ್ ನ ಅಡಿಯಲ್ಲಿಯ ಅಂಗ ಸಂಸ್ಥೆಗಳ ಎಲ್ಲಾ ಶಾಲಾ ಕಾಲೇಜುಗಳ ಬೋಧಕರ ಹಾಗೂ ಅವರಿಗೆ ಬೆಂಬಲವಾಗಿ ನಿಂತ ಆಡಳಿತ ಮಂಡಳಿ ಹಾಗೂ ಪಾಲಕವರ್ಗದವರನ್ನು ಶ್ಲಾಘಿಸಿದರು.

ಬದಲಾವಣೆ ಜಗದ ನಿಯಮ, ನಾವು ಬದಲಾವಣೆಗೆ ಹೊಂದಿಕೊಳ್ಳಬೇಕು. ವೇಗದ ಜೀವನಶೈಲಿ ನಮ್ಮದಾಗುತ್ತಿದೆ. ಇಂತಹ ಜೀವನ ಶೈಲಿಯಲ್ಲಿ ಸಾಧನೆಯೂ ಕಷ್ಟಕರವಾಗಿದ್ದು, ನಾವು ಕಠಿಣ ಪರಿಶ್ರಮದಿಂದ ಸಾಧನೆಯೆಡೆಗೆ ಮುನ್ನಡೆಯಬೇಕು ಎಂದರು. ಜೊತೆಗೆ ಮಕ್ಕಳು ಯಾವ ರೀತಿ ಶಿಕ್ಷಣ ಪಡೆಯಬೇಕು ಎಂಬುದನ್ನು ಹಲವಾರು ನಿದರ್ಶನಗಳ ಮೂಲಕ ಮನವರಿಕೆ ಮಾಡಿದರು.

ಮುಖ್ಯ ಅತಿಥಿಗಳು ಹಾಗೂ ವಿಜ್ಞಾನ ವಸ್ತುಪ್ರದರ್ಶನದ ಉದ್ಘಾಟನೆಮಾಡಿದ ಇಸ್ರೋದ ವಿಜ್ಞಾನಿ ಶಾಂತಲಾ ಎಚ್.ಎಸ್ ಮಾತನಾಡಿ ಕೊಂಕಣದ ವಿದ್ಯಾರ್ಥಿಗಳು ವಸ್ತುಪ್ರದರ್ಶನದಲ್ಲಿ ತಯಾರಿಸಿದ ವಿಜ್ಞಾನ ಮಾದರಿಗಳನ್ನು ಗಮನಿಸಿದೆ. ಮನಸ್ಸಿಗೆ ಸಂತಸವೆನಿಸಿದೆ. ಭವಿಷ್ಯದಲ್ಲಿ ಈ ವಿದ್ಯಾರ್ಥಿಗಳು ಉತ್ತಮ‌ ಸಾಧಕರಾಗುವರೆಂಬುದಕ್ಕೆ ಇದು ಸಾಕ್ಷಿ ಎಂದರು.

300x250 AD

ಚಲನಚಿತ್ರ ನಿರ್ದೇಶಕರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಂಸ್ಥೆಯ ಹಿರಿಯ ವಿದ್ಯಾರ್ಥಿ ವಿಲಾಸ್ ಕ್ಷತ್ರಿಯ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಕೊಂಕಣ ಸಂಸ್ಥೆಯಲ್ಲಿ ಕಲಿತ ತಾನು ಅನೇಕ ಉತ್ತಮ ಅಂಶಗಳನ್ನು ಪಡೆದುಕೊಂಡಿರುವುದಾಗಿ ಹೇಳಿ, ವಿದ್ಯಾರ್ಥಿಗಳು ರ‌್ಯಾಂಕ್ ನ ಹಿಂದೆ ಬೀಳಬೇಡಿ ಜ್ಞಾನದ ಹಿಂದೆ ಬೀಳಿ ಆಗ ರ‌್ಯಾಂಕ್ ತಾನಾಗೇ ಸಿಗುವುದೆಂದರು.

ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ವಿಠಲ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುರಳೀಧರ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಸಹಕಾರ್ಯದರ್ಶಿ ಶೇಷಗಿರಿ ಶಾನಭಾಗ, ಹಾಗೂ ವಿಶ್ವಸ್ಥರು ಮತ್ತು ಎಲ್ಲಾ ಶಾಲಾ ಕಾಲೇಜಿನ‌ ಮುಖ್ಯ ಶಿಕ್ಷಕರು ಪ್ರಾಚಾರ್ಯರು ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಸಂಸ್ಥೆಯ ಶಿಕ್ಷಣ ಸಲಹೆಗಾರ ಆರ್.ಎಚ್. ದೇಶಭಂಡಾರಿ ಮಾತೃ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳಿದ್ದರು. ಶಿಕ್ಷಕ ಗಣೇಶ ಜೋಶಿ ಸ್ವಾಗತಿಸಿ ನಿರೂಪಿಸಿದರು. ಶಾಹಿದಾ ಶೆಟ್ಟಿ ಸಹಕರಿಸಿದರು. ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮೆಚ್ಚುಗೆ ಪಡೆದುಕೊಂಡವು.

Share This
300x250 AD
300x250 AD
300x250 AD
Back to top