Slide
Slide
Slide
previous arrow
next arrow

ಕಳ್ಳತನವಾಗದ ಏಕೈಕ ಸಂಗತಿಯೆಂದರೆ ‘ಜ್ಞಾನ’: ವಿನಾಯಕ್ ಭಟ್

300x250 AD

ಶಿರಸಿ: ಯಾವುದೇ ಮನುಷ್ಯನು ನಾನು ಎಂಬ ಭಾವನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳದೆ ನಾವು ಎಂಬ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಾವು ಎಂಬುದನ್ನು ಬೆಳೆಸಿಕೊಂಡಲ್ಲಿ ಜೀವನ ಸಾರ್ಥಕವಾಗುವುದು ಎಂದು ನಿವೃತ್ತ ಸೈನಿಕ ವಿನಾಯಕ್ ಭಟ್ ಹೇಳಿದರು.

ದೊಡ್ನಳ್ಳಿ ಗ್ರಾಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯನಲ್ಲಿ ನಾವು ಎಂಬ ಭಾವನೆ ಮೂಡಲು ಸಂಸ್ಕಾರವೇ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಕಡಿಮೆ ಆಗುತ್ತಿದೆ. ವಿದ್ಯಾವಂತರು ಸಂಸ್ಕಾರದಲ್ಲಿ ಅವಿದ್ಯಾವಂತರಂತೆ ವರ್ತಿಸುತ್ತಾರೆ. ಇವರಿಗೆ ಮೂಲ ಸಂಸ್ಕಾರದ ಜ್ಞಾನ ಇಲ್ಲ. ಕಳ್ಳತನವಾಗದ ಏಕೈಕ ವಸ್ತುವೆಂದರೆ ಜ್ಞಾನ . ವಿದ್ಯೆ ಬೇರೆಯವರಿಗೆ ಕೊಟ್ಟಷ್ಟು ನಮ್ಮ ವಿದ್ಯೆ ಬೆಳೆಯುತ್ತ ಹೋಗುತ್ತದೆ. ಇಂದಿನ ವಿದ್ಯಾರ್ಥಿಗಳು ಸದ್ಗುಣವಂತರಾಗಬೇಕು. ಭೂಮಿಯು ಸಮೃದ್ಧಿಯಾಗಿರಲು ಕೆಲವು ಕ್ರಿಮಿ-ಕೀಟಗಳು ಅವಶ್ಯಕವಾಗಿರುತ್ತದೆ. ಆದರೆ ಇಂದು ಹಣದ ಆಸೆಗೆ ಬಳಸುವ ಕೀಟನಾಶಕಗಳಿಂದ ಭೂಮಿಯನ್ನು ಹಾಳುಗೆಡುವುತ್ತಿದ್ದೇವೆ. ಹಾಗೆ ನಮ್ಮ ಆಹಾರಕ್ಕೆ ನಾವೇ ವಿಷ ಬೆರೆಸಿಕೊಳ್ಳುತ್ತಿದ್ದೇವೆ. ಈಗಿನ ವಿದ್ಯಾರ್ಥಿಗಳು ಆಕರ್ಷಣೆಗೆ ಒಳಗಾಗಿ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದೇವೆ. ಇಂದಿನ ಯುವ ಜನಾಂಗವೇ ನಾಳಿನ ಸದೃಢ ಭಾರತದ ಬುನಾದಿ ಎಂದು ಹೇಳಿದರು.

300x250 AD

ಎನ್ಎಸ್ಎಸ್ ಅಧಿಕಾರಿ ಆರ್.ಆರ್.ಹೆಗಡೆ ಮಾತನಾಡಿ ಯುವಜನತೆ ನೆಲ ಜಲಗಳ ಸಂರಕ್ಷಣೆಯಲ್ಲಿ ಇವರ ಪಾತ್ರ ಮುಖ್ಯವಾದದ್ದು. ಅವರೇ ಮುಂದೆ ಅದನ್ನು ನೆಲ-ಜಲಗಳನ್ನು ಕಾಪಾಡಬೇಕಾಗುತ್ತದೆ. ಮಳೆಯ ಅಭಾವದಿಂದ ಜಲದ ಕೊರತೆ ಪ್ರಾರಂಭವಾಗುತ್ತದೆ. ಇದರಿಂದಾಗಿ ನೀರನ್ನು ಹಿತ ಮಿತವಾಗಿ ಬಳಸಬೇಕು. ಯುವಕರಾದವರು ಅಂತರ್ಜಾಲದಲ್ಲಿ ಆಧುನಿಕತೆ ಹೊಂದಿದ್ದಾರೆ ಹೊರತು ಜೀವನದಲ್ಲಲ್ಲ ಎಂದು ನುಡಿದರು.

ಶ್ರೀದೇವಿ ಸ್ವಾಗತಿಸಿದರೆ, ದರ್ಶನ್ ನಿರೂಪಿಸಿದರು ಹಾಗೂ ಚೇತನಾ ವಂದಿಸಿದರು.

Share This
300x250 AD
300x250 AD
300x250 AD
Back to top