Slide
Slide
Slide
previous arrow
next arrow

ಹಾಸ್ಯ ಸಾಹಿತ್ಯಕ್ಕೆ ಯಾವುದೇ ಪಂಥಗಳಿಲ್ಲ: ಭುವನೇಶ್ವರಿ ಹೆಗಡೆ

300x250 AD

ಶಿರಸಿ: ಹಾಸ್ಯ ಸಾಹಿತ್ಯಕ್ಕೆ ಯಾವುದೇ ಪಂಥಗಳಿಲ್ಲ, ಇದು ಬದುಕಿನ ಒಂದು ಭಾಗ ಎಂದು ಉ.ಕ.ಜಿಲ್ಲೆಯ ಖ್ಯಾತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ವ್ಯಕ್ತಪಡಿಸಿದರು.

ಅವರು ಎಮ್.ರಮೇಶ ಪ್ರಶಸ್ತಿ ಸಮಿತಿ ಹಾಗೂ ನಯನ ಫೌಂಡೇಶನ್ ಸಹಯೋಗದೊಂದಿಗೆ 2023ರ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು. ಅನೇಕ ವೇಳೆ ಪ್ರಶಸ್ತಿ ಬಂದಾಗ ಯಾವ ಬಣ, ಪಂಥ ಮುಂತಾದ ಅರ್ಥಹೀನ ಪ್ರಶ್ನೆಗಳನ್ನು ಕೇಳುವದು ಸಾಮಾನ್ಯವಾಗಿ ಬಿಟ್ಟಿದೆ. ಹಾಸ್ಯ ಬದುಕಿನ ಒಂದು ಭಾಗ ಅದಿಲ್ಲದೇ ಬದುಕು ಪೂರ್ಣವಾಗದು. ಎಮ್. ರಮೇಶ್ ಅವರ ಮಾತು ಹಾಗೂ ಬದುಕು ಅರ್ಥಗರ್ಭಿತ ವಾದುದು. ಅವರು ನಗೆಯಾಡದೇ ಇತರರನ್ನು ನಗಿಸುತ್ತಿದ್ದರು. ಬದುಕನ್ನು, ಜನರನ್ನು ಪ್ರೀತಿಸುವ ಅಪರೂಪದ ವ್ಯಕ್ತಿಯಾಗಿದ್ದರು. ಜನರಿಗೆ ನೆರವಾಗುವುದು, ಅವರ ಸಮಸ್ಯೆಯಲ್ಲಿ ಭಾಗಿಯಾಗುವದು ಅವರ ಉಸಿರಾಗಿತ್ತು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧರಣೇಂದ್ರ ಕುರಕುರಿ, ಎಮ್.ರಮೇಶ್ ಅವರು ಆತ್ಮೀಯ ಮಿತ್ರರಾಗಿದ್ದರು.ಅವರ ಪಾಠ ಹಾಗೂ ಮಾತು ಪ್ರಭಾವಶಾಲಿಯಾಗಿರುತ್ತಿತ್ತು.ಅವರ ಹೆಸರಿನ ಪ್ರಶಸ್ತಿ ಅತ್ಯಂತ ಮೌಲ್ಯಯುತವಾದುದು.ಹಾಸ್ಯ ಸಾಹಿತ್ಯಕ್ಕೆ ಪ್ರಭಾವವನ್ನು ತಂದು ಕೊಟ್ಟಿರುವ ಭುವನೇಶ್ವರಿ ಹೆಗಡೆಯವರು ಅಭಿನಂದನೀಯರಾಗಿದ್ದಾರೆ ಎಂದು ಹೇಳಿದರು.

300x250 AD

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಪ್ರಾಂಶುಪಾಲೆ ಕುಮುದಾ ಶರ್ಮಾ ಮಾತನಾಡಿ ರಮೇಶ್ ಅವರು ಸಾಹಿತ್ಯವನ್ನು ಬರೆಯದಿದ್ದರೂ ಅವರ ಬದುಕು ಸಾಹಿತ್ಯಮಯವಾಗಿತ್ತು. ಅವರ ಅನುಭವ, ಜ್ಞಾನ ಭಂಡಾರ ಪ್ರಶಂಸನೀಯವಾಗಿತ್ತು ಎಂದು ಅವರ ಒಡನಾಟವನ್ನು ನೆನಪಿಸಿಕೊಂಡರು.

ಶೈಲಜಾ ಗೋರನಮನೆ ಸನ್ಮಾನ ಪತ್ರವನ್ನು ವಾಚಿಸಿದರು. ಪ್ರಾರ್ಥನೆ ರೋಹಿಣಿ ಪ್ರಾರ್ಥಿಸಿದರು, ಮಧುಕೇಶ್ವರ ಸ್ವಾಗತಿಸಿ, ಕಳೆದ ಮೂರು ವರ್ಷಗಳಿಂದ ನಮ್ಮಸಮೀತಿ ಪ್ರಶಸ್ತಿಯನ್ನು ನೀಡುತ್ತ ಬಂದಿದೆ, ತಂದೆ ಎಮ್. ರಮೇಶ ಅವರು ಸಾಹಿತ್ಯ , ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಇದ್ದರು ಎಂದು ವಿವರಿಸಿದರು. ಕಾರ್ಯಕ್ರಮ ನಿರ್ವಹಣೆ ಹಾಗು ಅತಿಥಿಗಳ ಪರಿಚಯವನ್ನು ವೈಶಾಲಿಯವರು ಮಾಡಿದರು.

Share This
300x250 AD
300x250 AD
300x250 AD
Back to top