Slide
Slide
Slide
previous arrow
next arrow

ಜೋಯಿಡಾದಲ್ಲಿ ಸಾರಿಗೆ ವ್ಯವಸ್ಥೆ ಸಮಸ್ಯೆ ಬಗೆಹರಿಸಲು ಆಗ್ರಹ

300x250 AD

ಜೊಯಿಡಾ: ತಾಲೂಕಿನಲ್ಲಿ ಸಾರಿಗೆ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಶಾಸಕರು ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈ ಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜೊಯಿಡಾ ತಾಲೂಕಿನಲ್ಲಿ ಸಾರಿಗೆ ಡಿಪೋ ಇಲ್ಲ. ದಾಂಡೇಲಿ ಘಟಕವೇ ತಾಲೂಕಿನಲ್ಲಿ ಸಾರಿಗೆ ವ್ಯವಸ್ಥೆ ಕೈಗೊಂಡಿದ್ದು ಜನತೆಗೆ ಸರಿಯಾಗಿ ವ್ಯವಸ್ಥೆ ಮಾಡದೆ ಕಳೆದ ಹಲವಾರು ವರ್ಷಗಳಿಂದ ಜನರ ಸಂಕಷ್ಟಕ್ಕೆ ಸಭೆಗಳಲ್ಲಿ ಅಧಿಕಾರಿಗಳು ಹೇಳುವ ಹಾರಿಕೆಯ ಮಾತುಗಳಿಂದಲೇ ಸಮಾಧಾನ ಪಡುವಂತಾಗಿದೆ.

ಅತ್ಯಂತ ವಿಸ್ತಾರವಾದ ತಾಲೂಕಿಗೆ ಕೇವಲ ಕಾಟಾಚಾರಕ್ಕೆ ಬಸ್ ಬಿಟ್ಟಂತೆ ಮಾಡಲಾಗುತ್ತಿದೆ.ಪ್ರಯಾಣಿಕರು ಎರಡು ಬಸ್ ತುಂಬುವಷ್ಟಿದ್ದರೂ ಇಲಾಖೆಗೆ ಬಸ್ ಬಿಡಲು ಆಲಸ್ಯವಾಗಿದೆ. ಬೆಳಿಗ್ಗೆ ಶಾಲೆ, ಕಾಲೇಜ್ ಗಳಿಗೆ ಹೋಗುವ ವಿದ್ಯಾರ್ಥಿಗಳ ಸ್ಥಿತಿಯಂತೂ ಹೇಳತೀರದಾಗಿದೆ. ಪ್ರತಿ ಹಳ್ಳಿಗಳಿಗೂ ನಿಲುಗಡೆ ನೀಡಬೇಕಾದ ಬಸ್ ಗಳು ನಿಲ್ಲುತ್ತಿಲ್ಲ. ಬಿಟ್ಟು ಹೋದ ಹಳ್ಳಿಗಳ ಮಕ್ಕಳಿಗೆ ಶಾಲೆ , ಕಾಲೇಜ್ ಬೇಡವೇ? ಬದಲಿ ವ್ಯವಸ್ಥೆ ಇಲ್ಲವೇ ಇಲ್ಲ. ಬಸ್ ಕೆಟ್ಟು ನಿಂತಾಗ ಬೇರೆ ಬಸ್ ಗಳು ಬಂದು ಸೇವೆ ನೀಡಿದ ದಾಖಲೆಗಳೇ ಇಲ್ಲ. ಹೀಗಾದರೆ ಜನತೆಯ ಪಾಡೇನು? ಎಂದು ಶ್ರೀ ಕ್ಷೇತ್ರ ಉಳವಿ , ಕಾರ್ಟೋಲಿ, ರಾಮನಗರ , ಜೊಯಿಡಾ , ಜಗಲಬೇಟ, ಅನಮೋಡ ಎಲ್ಲೇ ಹೋದರು ಸಾರಿಗೆ ಇಲಾಖೆಗೆ ಹಿಡಿ ಶಾಪ ಹಾಕುತ್ತಾ ಜನರು ಸಂಕಷ್ಟ ಹೇಳುತ್ತಿದ್ದಾರೆ.

ಕಳೆದ 4 ತಿಂಗಳಿಂದ ಗುಂದಕ್ಕೆ ಬಿಡುವ ಬಸ್ ನ್ನು ನಿಲ್ಲಿಸಲಾಗಿದೆ. ಶಿರಸಿಯಿಂದ ಬರುವ ಬಸ್ಸಿಗೂ ಅನುಮತಿ ನೀಡದೆ ತಡೆ ಹಿಡಿಯಲಾಗಿದೆ. ತಾನು ಕೊಡ, ಪರರಿಗೂ ಬಿಡ ಎಂಬಂಥ ಲಕ್ಷಣದ ದಾಂಡೇಲಿ ಘಟಕ ವ್ಯವಸ್ಥಾಪಕರಿಂದ ಜನತೆಗೆ ಸಂಕಷ್ಟ ಎದುರಾಗಿದೆ.

300x250 AD

ಕಳೆದ 19 ರಂದು ಜನತಾ ದರ್ಶನದಲ್ಲಿ ಜಿಲ್ಲಾಧಿಕಾರಿಗಳ ಮುಂದೆ ಜನತೆಯ ಸಮಸ್ಯೆಗೆ ಕೂಡಲೇ ಸ್ಪಂದಿಸುವ ಭರವಸೆ ನೀಡಿದ ದಾಂಡೇಲಿ ಘಟಕ ವ್ಯವಸ್ಥಾಪಕರು ಇದುವರೆಗೂ ಯಾವ ಕ್ರಮವನ್ನೂ ಕೈಗೊಳ್ಳದೆ ಧಾರವಾಡಕ್ಕೆ ದಾಂಡೇಲಿಯಿಂದ 5 ನಿಮಿಷಕ್ಕೆ ಒಂದು ಬಸ್ ಬಿಡುತ್ತಾ ಜೊಯಿಡಾ ಜನತೆಗೆ ಮಲತಾಯಿ ದೋರಣೆ ಅಸಡ್ಡೆ ತೋರಿಸುತ್ತಿದ್ದಾರೆ. ಪ್ರತಿದಿನವೂ ಬಸ್ ಬಿಡಿ ಎಂದು ತಾಲೂಕಿನ ಜನತೆ ಕೇಳಿಕೊಳ್ಳದೆ ದಾಂಡೇಲಿಯಿಂದ ಬಸ್ ಹೊರಡುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶದಿಂದ ಹೇಳುತ್ತಾರೆ.

ಶಾಸಕ ಆರ್. ವಿ ದೇಶಪಾಂಡೆ ಅವರು ಕೂಡಲೇ ಈ ಬಗ್ಗೆ ಗಮನ ಹರಿಸಿ ಜನತೆಗೆ ಬಸ್ ನ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದಾಂಡೇಲಿ ಘಟಕ ಅಧಿಕಾರಿಗೆ ಹಲವಾರು ಬಾರಿ ಕರೆಮಾಡಿದರೂ ಸ್ವೀಕರಿಸುವುದಿಲ್ಲ. ಜವಾಬ್ದಾರಿ ಇಲ್ಲ. ನಮ್ಮ ತಾಲೂಕಿಗೆ ಸಾರಿಗೆ ಘಟಕ ಬೇಕು. ನಮ್ಮ ವಿದ್ಯಾರ್ಥಿಗಳ ಭವಿಷ್ಯ ಈ ಅಧಿಕಾರಿಯಿಂದ ಹಾಳಾಗುತ್ತಿದೆ. ಇದಕ್ಕೆ ಅವರಿಗೆ ಜಿಲ್ಲಾಧಿಕಾರಿಗಳೆ ಕ್ರಮ ಕೈ ಕೊಳ್ಳಬೇಕು.– ಗಣಪತಿ ಆಳ್ಳೆ – ರೈತ

Share This
300x250 AD
300x250 AD
300x250 AD
Back to top