ಹಳಿಯಾಳ: ಕೆ.ಎಲ್.ಎಸ್.ವಿ.ಡಿ.ಐ.ಟಿ.ಹಳಿಯಾಳದ ರಸಾಯನ ಶಾಸ್ತ್ರ ವಿಭಾಗದ ಪ್ರೊ. ಸ್ನೇಹಾ ಕುಲಕರ್ಣಿ, ವಿಟಿಯುದಿಂದ ಪಿ.ಹೆಚ್.ಡಿ. ಪಡೆದಿದ್ದಾರೆ .
ವಿಟಿಯುದಿಂದ ಮಾನ್ಯತೆ ಪಡೆದ, ವಿಡಿಐಟಿ ಮಹಾವಿದ್ಯಾಲಯದ ರಸಾಯನಶಾಸ್ತ್ರ ಸಂಶೋಧನಾ ಕೇಂದ್ರದಲ್ಲಿ ” ಸ್ಟಡೀಸ್ ಆನ್ ಬಯೋಡೀಸಲ್ ಸಿಂಥೆಸಿಸ್ ಅಂಡ್ ಅಪ್ಲಿಕೇಶನ್ ಆಫ್ ಬಯೋ ಪ್ರಾಡಕ್ಟ್ಸ್ ” ಎಂಬ ವಿಷಯದ ಮೇಲೆ ಡಾ.ಆರ್.ಎಸ್.ಮಲ್ಲಾಡಿ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ. ಪೂರ್ಣಗೊಳಿಸಿದ್ದಾರೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಗುವಾಹಟಿಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಕೌಸ್ತುಭ ಮೋಹಾಂತಿ ಇವರು ಪರೀಕ್ಷಕರಾಗಿ ಆಗಮಿಸಿದ್ದರು. ಇತ್ತೀಚಿಗೆ ಬೆಂಗಳೂರಿನಲ್ಲಿ ಇವರ ಸಮ್ಮುಖದಲ್ಲಿ ಸ್ನೇಹ ಕುಲಕರ್ಣಿ ತಮ್ಮ ಸಂಶೋಧನೆಯನ್ನು ಮಂಡಿಸಿದರು.
ವಿಟಿಯುಯಿಂದ ಮಾನ್ಯತೆ ಪಡೆದ ಮಹಾವಿದ್ಯಾಲಯದ 7 ಸಂಶೋಧನಾ ಕೇಂದ್ರಗಳಲ್ಲಿ ನಡೆಯುತ್ತಿರುವ ಸಂಶೋಧನಾ ಕಾರ್ಯಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕುರ್ ಹರ್ಷ ವ್ಯಕ್ತಪಡಿಸಿ ಶುಭ ಕೋರಿದ್ದಾರೆ .
ಪ್ರೊ. ಸ್ನೇಹಾ ಕುಲಕರ್ಣಿ ಅವರನ್ನು ಈ ಸಾಧನೆಗೆ ಪ್ರಾಚಾರ್ಯ ಡಾ.ವಿ.ಎ. ಕುಲಕರ್ಣಿ ಮತ್ತು ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.