ಬನವಾಸಿ: ಇಲ್ಲಿನ ಅಜ್ಜರಣಿ ರಸ್ತೆಯಲ್ಲಿರುವ ಶ್ರೀ ತತ್ವಮಸಿ ಅಯ್ಯಪ್ಪ ಸೇವಾ ಸನ್ನಿಧಿಯ ವಾರ್ಷಿಕ ಮಹಾಪೂಜಾ ಕಾರ್ಯಕ್ರಮ ಜ.1ರಂದು ನಡೆಯಲಿದೆ.
ಮುಂಜಾನೆ 8.30ಗಂಟೆಗೆ ಗಣಹೋಮದೊಂದಿಗೆ ಪೂಜಾ ಕಾರ್ಯಕ್ರಮ ಆರಂಭವಾಗಲಿದೆ. ಮಧ್ಯಾಹ್ನ 1ಗಂಟೆಗೆ ಮಹಾಪೂಜೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದ್ದು,ನಂತರ ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ 8 ಗಂಟೆಗೆ ಶಿವರಾಜ ಆಚಾರ್ಯ ಗುರುಸ್ವಾಮಿಯವರ 18ನೇ ವರ್ಷದ ಶಬರಿಮಲೆ ಯಾತ್ರೆಯ ನಿಮಿತ್ತವಾಗಿ ಗುರು ವಂದನಾ ಕಾರ್ಯಕ್ರಮ ಜರುಗಲಿದೆ.
ಬನವಾಸಿ ಹೊಳೆಮಠದ ನಾಗಭೂಷಣ ಸ್ವಾಮಿಜೀ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಗುರುಸ್ವಾಮಿಗಳಾದ ಶಿರಸಿ ಅಯ್ಯಪ್ಪನಗರದ ಸಂದೀಪ್ ಶಿರ್ಸಿಕರ, ಚಿಕ್ಕಮಗಳೂರಿನ ರಾಜು ನಾಯರ್, ವಡ್ಡಿನಕೊಪ್ಪ ಬಸವಣ್ಣೆಪ್ಪ ಜೋಗಿ, ಶಿರಸಿ ರಾಮನಬೈಲ್ ನ ನಿತ್ಯಾನಂದ, ಮಳಗಿಯ ವೆಂಕಟೇಶ, ಬನವಾಸಿಯ ಪರಶುರಾಮ ಜೋಗಿ, ಪಾಂಡುರಂಗ, ಲಕ್ಷ್ಮಣ, ಆನಂದ, ಗುರುಮೂರ್ತಿ ಮೇಸ್ತ್ರಿ ಆಗಮಿಸುವರು.
ರಾತ್ರಿ 8.30 ಗಂಟೆಗೆ ಝೀ ಕನ್ನಡ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಹಾಗೂ ಗಾಯಕ ಮಂಜುನಾಥ ಆಚಾರ್ಯ ಅವರಿಂದ ಭಕ್ತಿ ಲಹರಿ ಹಾಗೂ ಶಿರಸಿಯ ಯಕ್ಷಗಾನ ಕಲಾವಿದೆ ಕು.ತುಳಸಿ ಬೆಟ್ಟಕೊಪ್ಪ ಅವರಿಂದ ಯಕ್ಷಗಾನ ಜರುಗುವುದು. ನಂತರದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಂದ ಕೆಂಡ ಸೇವೆ ಮತ್ತು ಅಪ್ಪಂ ಸೇವೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಗುರುಸ್ವಾಮಿ ಶಿವರಾಜ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.