Slide
Slide
Slide
previous arrow
next arrow

ಎನ್ಎಸ್ಎಸ್. ಶಿಬಿರದ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಎಸ್.ಎನ್.ಹೆಗಡೆ

300x250 AD

ಶಿರಸಿ: ವಿದ್ಯಾರ್ಥಿಗಳಾದವರು ಎನ್.ಎಸ್.ಎಸ್. ಶಿಬಿರದಲ್ಲಿ ಪಡೆಯುವ ಅನುಭವವನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ಎನ್.ಎಸ್.ಎಸ್. ಎಂಬುದು ನೀತಿಪಾಠದ ಶಾಲೆಯಾಗಿದೆ ಇಲ್ಲಿ ಶಿಬಿರಾರ್ಥಿಗಳು ಶಿಸ್ತು ಸಂಯಮದಿಂದ ವರ್ತಿಸಬೇಕು ಎಂದು ನರೇಬೈಲ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಹೆಗಡೆ ಹೇಳಿದರು.

ಅವರು ದೊಡ್ನಳ್ಳಿ ಗ್ರಾಮದಲ್ಲಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
25-30 ವರ್ಷಗಳ ಹಿಂದೆ ಎಂ ಎಂ ಕಾಲೇಜಿನ ಪ್ರಾಚಾರ್ಯರಾಗಿದ್ದ ಎಲ್.ಟಿ.ಶರ್ಮಾ ದೊಡ್ನಳ್ಳಿ ಗ್ರಾಮದಲ್ಲಿ ಮೊದಲ ಬಾರಿಗೆ ಎನ್ಎಸ್ಎಸ್ ಶಿಬಿರ ನಡೆಸಿದರು. ಅದೇ ಅವಧಿಯಲ್ಲಿ ಊರಿನ ರಸ್ತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಎನ್ಎಸ್ಎಸ್ ಅಂದರೆ ಒಂದು ಶಿಸ್ತು ಬದ್ದ ಸಂಸ್ಥೆಯಾಗಿದೆ. ದೊಡ್ನಳ್ಳಿ ಗ್ರಾಮಕ್ಕೆ ಎಲ್.ಟಿ. ಶರ್ಮರವರ ಕೊಡುಗೆ ಅವಿಸ್ಮರಣೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಮಾತನಾಡಿ ದೊಡ್ನಳ್ಳಿ ಗ್ರಾಮದ ಜನರ ಮನಸ್ಸು ಬಹಳ ದೊಡ್ಡದು ನಮ್ಮ ಹಾಗೂ ನಮ್ಮ ವಿದ್ಯಾಲಯದ ಇತರ ಅಂಗಸಂಸ್ಥೆಗಳಿಗೆ ಎನ್ಎಸ್ಎಸ್ ಶಿಬಿರ ನಡೆಸಲು ಅವಕಾಶವನ್ನು ನೀಡುತ್ತಾ ಬಂದಿದೆ. ನಾವು ಇಂದು ಪುಣ್ಯಭೂಮಿಯಲ್ಲಿದ್ದೇವೆ. ಎನ್ಎಸ್ಎಸ್ ಶಿಬಿರವನ್ನು ನಡೆಸಲು ಪ್ರೇರಕವಾದುದ್ದೇ ಸ್ವಚ್ಛ ಭಾರತ ಅಭಿಯಾನ. ನಮ್ಮ ದೇಶಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವವನ್ನು ಕೇಳಿದಾಗ ನಮ್ಮ ದೇಶದ ಅನೈರ್ಮಲ್ಯಿಕರಣದ ಕಾರಣವನ್ನು ನೀಡಿ ಖಾಯಂ ಸದಸ್ಯತ್ವವನ್ನು ನಿರಾಕರಿಸಿದರು. ಆಗ ಪ್ರಧಾನಿ ನರೇಂದ್ರ ಮೋದಿ ಸ್ವಚ್ಚ ಭಾರತ ಅಭಿಯಾನವನ್ನು ಆರಂಭಿಸಿದರು. ಪದವಿ ಜೊತೆಗೆ ಕೌಶಲ್ಯವನ್ನು ಹೊಂದಿರುವುದು ಅವಶ್ಯವೋ ಹಾಗೆಯೇ ಪಠ್ಯದ ಜೊತೆಗೆ ಪಠ್ಯೇತರ ಚಟುವಟುಕೆಗಳೂ ವಿದ್ಯಾರ್ಥಿ ಜೀವನದಲ್ಲಿ ಮುಖ್ಯ ಎನ್ಎಸ್ಎಸ್, ಎನ್.ಸಿ.ಸಿ. ರೆಡ್ ಕ್ರಾಸ್ ಮುಂತಾದ ಸೇವಾ ಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

300x250 AD

ದೊಡ್ನಳ್ಳಿ ಪಂಚಾಯತ್ ಅಧ್ಯಕ್ಷ ರಾಜೇಶ್ ಮಡಿವಾಳ, ಸದಸ್ಯ ರಘುಪತಿ ಪಾಂಡು ನಾಯ್ಕ ಸಾಮಾಜಿಕ ಕಾರ್ಯಕರ್ತ ರಾಮ ಹನುಮಂತ ಜೋಗಿ,ಎನ್ಎಸ್ಎಸ್ ಅಧಿಕಾರಿ ಡಾ.ಆರ್.ಆರ್. ಹೆಗಡೆ ಉಪಸ್ಥಿತರಿದ್ದರು. ಕು.ಚೈತ್ರಾ ಸ್ವಾಗತಿಸಿದರು.ಕು ಕಾವ್ಯಾ ಪ್ರಾರ್ಥನಾ ಗೀತೆ ಹಾಡಿದರು. ಕು.ಭರತ್ ನಿರೂಪಿಸಿದರು. ಕು.ಸಹನಾ ವಂದಿಸಿದರು.

Share This
300x250 AD
300x250 AD
300x250 AD
Back to top