Slide
Slide
Slide
previous arrow
next arrow

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು

300x250 AD

ಭಟ್ಕಳ: ಅಪರಿಚಿತ ವಾಹನವೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಾವರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-66 ರ ದೊಡ್ಡಬಲಸೆ ಕ್ರಾಸ್ ಸಮೀಪದ ಹವ್ಯಕ ಸಭಾಭವನ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ನಾರಾಯಣ ಮಾದೇವ ನಾಯ್ಕ ಎಂದು ತಿಳಿದು ಬಂದಿದೆ. ಅಪರಿಚಿತ ವಾಹನ ಯಾವುದೋ ಕಡೆಯಿಂದ ದುಡುಕಿನಿಂದ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ-66 ರ ದೊಡ್ಡಬಲಸೆ ಕ್ರಾಸ್ ಸಮೀಪದ ಹವ್ಯಕ ಸಭಾಭವನ ಬಳಿ ನಾರಾಯಣ ಮಾದೇವ ನಾಯ್ಕ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಆತನ ಕಾಲು ಹಾಗೂ ತಲೆಗೆ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ.

300x250 AD

ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top