Slide
Slide
Slide
previous arrow
next arrow

ಸುಲಭ ಶೌಚಾಲಯಕ್ಕೆ ಹೋಗುವ ರಸ್ತೆ ಅಸ್ಯವ್ಯಸ್ತ: ದುರಸ್ತಿಗೆ ಮನವಿ

300x250 AD
  • ಸಂದೇಶ್ ಎಸ್.ಜೈನ್, ದಾಂಡೇಲಿ

ದಾಂಡೇಲಿ : ಅದು ಸಂಡೆ ಮಾರ್ಕೆಟ್‌ನಲ್ಲಿ ಹಾಗೂ ಮೀನು ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲೆಂದು ನಿರ್ಮಾಣ ಮಾಡಿರುವ ಸಾರ್ವಜನಿಕ ಸುಲಭ ಶೌಚಾಲಯ. ಶೌಚಾಲಯ ಏನೋ ಸುಲಭ ಶೌಚಾಲಯ, ಆದರೆ ಆ ಶೌಚಾಲಯಕ್ಕೆ ಹೋಗಲು ದಾರಿ ಮಾತ್ರ ಸುಲಭವಿಲ್ಲ. ಅದು ಮಹಿಳೆಯರಂತೂ ಎದ್ದು ಬಿದ್ದು ಶೌಚಾಲಯಕ್ಕೆ ಹೋಗುವ ಸ್ಥಿತಿ ಇಲ್ಲಿದೆ.

ಅಂದಹಾಗೆ ಇದು ನಗರದ ಸಂಡೆ ಮಾರ್ಕೆಟ್ ಮತ್ತು ಮೀನು ಮಾರ್ಕೆಟ್ ಹತ್ತಿರದಲ್ಲಿರುವ ಸಾರ್ವಜನಿಕ ಸುಲಭ ಶೌಚಾಲಯಕ್ಕೆ ಹೋಗುವ ರಸ್ತೆಯ ಸದ್ಯದ ಚಿತ್ರಣ. ಜೆ ಎನ್ ರಸ್ತೆಯಿಂದ ಈ ಸುಲಭ ಶೌಚಾಲಯಕ್ಕೆ ಹೋಗಲು ರಸ್ತೆ ಇದ್ದು, ಆ ರಸ್ತೆ ಮಾತ್ರ ಕೆಸರು ಗದ್ದೆಯಾಗಿ ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಒಂದು ವೇಳೆ ತುರ್ತಾಗಿ ಸುಲಭ ಶೌಚಾಲಯಕ್ಕೆ ಹೋಗುವುದಾದರೂ ಎದ್ದು ಬಿದ್ದು ಹೋಗಬೇಕಾದ ಅನಿವಾರ್ಯತೆ ಸ್ಥಳೀಯರದ್ದಾಗಿದೆ. ಆದ್ದರಿಂದ ಈ ಕೂಡಲೇ ಸುಲಭ ಶೌಚಾಲಯಕ್ಕೆ ಹೋಗುವ ರಸ್ತೆಯನ್ನು ದುರಸ್ತಿ ಮಾಡಿ ಕೊಡುವಂತೆ ನಗರದ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷ ವಿಷ್ಣು ನಾಯರ್ ಸೇರಿದಂತೆ ಸಂಡೇ ಮಾರ್ಕೆಟ್ ಮತ್ತು ಮೀನು ಮಾರ್ಕೆಟ್ ವ್ಯಾಪಾರಸ್ಥರು ಸೋಮವಾರ ಮೂಲಕ ಮನವಿಯನ್ನು ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top