ದಾಂಡೇಲಿ : ಭಾರಿ ಗಾಳಿ ಮಳೆಗೆ ನಗರದ ಟೌನಶಿಪ್ ನಲ್ಲಿರುವ ಸೈಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ಹತ್ತಿರ ಹಾಗೂ ಸ್ಟ್ಯಾನಿ ಡಯಾಸ್ ಅವರ ಮನೆಯ ಮುಂಭಾಗದ ರಸ್ತೆ ಬದಿಯಲ್ಲಿರುವ ಬೃಹತ್ ಗಾತ್ರದ ಮರವೊಂದು ಧರೆಗುರಳಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಶಾಲೆ ಆರಂಭವಾಗುವ ಇಲ್ಲವೇ ಶಾಲೆ ಬಿಡುವ ಸಂದರ್ಭದಲ್ಲಿ ಮರ ಬೀಳುತ್ತಿದ್ದಲ್ಲಿ ಅನಾಹುತ ನಡೆಯುತ್ತಿತ್ತು. ಅದೃಷ್ಟವಶಾತ್ ರಸ್ತೆಯಲ್ಲಿ ಯಾರು ಇಲ್ಲದೆ ಇದ್ದ ಕಾರಣಕ್ಕೆ ಯಾವುದೇ ಅನಾಹುತ ನಡೆದಿಲ್ಲ. ಘಟನೆ ನಡೆದ ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಿದ್ದ ಮರವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.