Slide
Slide
Slide
previous arrow
next arrow

ಕಾನೂನಿನ ಅರಿವಿನಿಂದ ಗ್ರಾಹಕರ ಹಕ್ಕುಗಳ ರಕ್ಷಣೆ ಸಾಧ್ಯ: ನ್ಯಾ.ಮನೋಹರ ಎಂ.

300x250 AD

ಅಂಕೋಲಾ : ಕಾನೂನುನ ಅರಿವು ಗ್ರಾಹಕರ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಹಿರಿಯ ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶರಾದ ಮನೋಹರ ಎಂ ಹೇಳಿದರು.

ಅವರು ತಾಲೂಕು ಕಾನೂನು ಸೇವಾ ಸಮಿತಿ ಅಂಕೋಲಾ ತಾಲೂಕು ಆಡಳಿತ ಇಲಾಖೆ, ವಕೀಲರ ಸಂಘ ಅಂಕೋಲಾ ಪಿಎಮ್ ಪದವಿ ಪೂರ್ವ ಕಾಲೇಜು ಅಂಕೋಲಾ ಹಾಗೂ ವಿವಿಧ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪಿಎಂ ಜ್ಯೂನಿಯರ್ ಕಾಲೇಜಿನ ಗಂಗಾದೇವಿ ತೊರ್ಕೆ ಸಭಾಭವನದಲ್ಲಿ ಜರುಗಿದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗ್ರಾಹಕರಿಗೆ‌ ಗ್ರಾಹಕರ ಹಕ್ಕುಗಳ ಕಾಯಿದೆಗಳ ಬಗ್ಗೆ ಅರಿವಿನ ಕೊರತೆ ಇರುವದರಿಂದ ತೊಂದರೆಗೆ ಒಳಗಾಗುತ್ತಾನೆ. ಗ್ರಾಹಕರ ಹಕ್ಕುಗಳ ರಕ್ಷಣೆಯ ಅರಿವು ಪ್ರತಿಯೊಬ್ಬರಿಗೂ ಇರಬೇಕು. ವಸ್ತುಗಳ ಗುಣಮಟ್ಟ, ಮಾರಾಟದ ದರ, ಅಗತ್ಯ ಪೂರೈಕೆ ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು. ನ್ಯೂನತೆಗಳು ಕಂಡುಬಂದಾಗ ದೂರು ದಾಖಲಿಸಲು ಪ್ರಬುದ್ಧರಾಗಿರಬೇಕು. ಉಚಿತ ಕಾನೂನು ನೆರವು ಕೂಡ ಗ್ರಾಹಕರಿಗೆ ನ್ಯಾಯ ಒದಗಿಸಿ ಕೊಡಲು ಸಹಕರಿಸುತ್ತದೆ ಎಂದರು. ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶರಾದ ಪ್ರಶಾಂತ ಬಾದವಾಡಗಿ ಮಾತನಾಡಿ ಗ್ರಾಹಕರಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ದೂರು ನೀಡಬಹುದು. ಹಾಗೂ ಉಚಿತ ಕಾನೂನು‌ ನೆರವು ಅಡಿಯಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾದ್ಯವಿದೆ. ಕಾನೂನಿನ ಜ್ಞಾನದ ಕೊರತೆಯಿಂದ ಅನೇಕ ಗ್ರಾಹಕರು ನ್ಯಾಯಕ್ಕಾಗಿ ಅಲೆದಾಡುವ ಪರಿಸ್ಥಿತಿ ಬರಬಾರದು. ಗ್ರಾಹಕರು ತಾವು ಖರೀದಿಸುವ ಸರಕು ಅಥವಾ ಸೇವೆಗಳಲ್ಲಿ ಯಾವುದೇ ರೀತಿಯ ಲೋಪಯುಕ್ತ ಸರಕುಗಳು, ಸಮಾಧಾನಕರವಲ್ಲದ ಸೇವೆಗಳು ಮತ್ತು ನ್ಯಾಯಸಮ್ಮತವಲ್ಲದ ವ್ಯಾಪಾರ ಪದ್ಧತಿಗಳನ್ನು ಕಂಡುಕೊಂಡರೆ ಅದರ ವಿರುದ್ಧ ಸುರಕ್ಷೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಈ ದಿನ ಗ್ರಾಹಕರಿಗೆ ಗ್ರಾಹಕ ಹಕ್ಕುಗಳ ಅರಿವಿನ ಮಹತ್ವವನ್ನು ಮನವರಿಕೆ ಮಾಡಿಕೊಡಲು ಹಾಗೂ ಇತರರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಅವಕಾಶ ಮಾಡಿಕೊಡಲಿದೆ. ಗ್ರಾಹಕ ಚಳವಳಿಗಳ ಮಹತ್ವ ಹಾಗೂ ಗ್ರಾಹಕರಿಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲಿದೆ ಎಂದರು.

300x250 AD

ಪಿ ಎಂ ಜ್ಯೂನಿಯರ ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಮಾತನಾಡಿ ದಿನನಿತ್ಯದಲ್ಲಿ ಅನೇಕ ರೀತಿಯ ಕಾನೂನುಗಳು ಅನ್ವಯವಾಗುತ್ತವೆ. ಗೊತ್ತಿದ್ದೂ ಗೊತ್ತಿಲ್ಲದೆ ಮಾಡಿದ ತಪ್ಪಿನಿಂದ ತೊಂದರೆಗೆ ಸಿಕ್ಕಿಕೊಳ್ಳುವ ಪ್ರಸಂಗ ಬರುತ್ತದೆ. ಹೀಗಾಗಿ ಜನಸಾಮಾನ್ಯರು, ಗ್ರಾಹಕರು, ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದಿರಬೇಕು ಎಂದರು. ನ್ಯಾಯವಾದಿ ಸುರೇಶ ಬಾನಾವಳಿಕರ ಗ್ರಾಹಕರ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ದಂಡಾಧಿಕಾರಿ ಅನಂತ ಶಂಕರ, ಅಂಕೋಲಾ ಉಪ ವಲಯ ಅರಣ್ಯಾಧಿಕಾರಿ ಮಹೇಶ, ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ, ಸರಕಾರಿ ಸಹಾಯಕ ಅಭಿಯೋಜಕಿ ಶಿಲ್ಪಾ‌ ನಾಯ್ಕ ಉಪಸ್ಥಿತರಿದ್ದು ಮಾತನಾಡಿದರು. ಉಪನ್ಯಾಸಕ ರಮಾನಂದ ನಾಯಕ ಸ್ವಾಗತಿಸಿದರು. ಉಮೇಶ ನಾಯ್ಕ ನಿರ್ವಹಿಸಿದರು. ಕಾಲೇಜಿನ ವಿದ್ಯಾರ್ಥಿ ರಂಜಿತಾ ಸಂಗಡಿಗರು ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಇದ್ದರು.

Share This
300x250 AD
300x250 AD
300x250 AD
Back to top