Slide
Slide
Slide
previous arrow
next arrow

ನಾಮ ಫಲಕದಲ್ಲಿ ಕನ್ನಡ ಬಳಕೆಗೆ ಸೂಚನೆ ನೀಡಲು ಮನವಿ ಸಲ್ಲಿಕೆ

300x250 AD

ಕಾರವಾರ: ನಾಮ ಫಲಕಗಳು ಕನ್ನಡದಲ್ಲಿ ಇರಬೇಕು ಎಂಬ ಸರಕಾರದ ಆದೇಶದನ್ವಯ ಕನ್ನಡ ಬಳಕೆ ಮಾಡಲು ಸೂಚಿಸಬೇಕು ಎಂದು ಕರುನಾಡ ರಕ್ಷಣಾ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಾಮ ಫಲಕಗಳು ಕನ್ನಡದಲ್ಲಿ ಇರಬೇಕು ಎಂಬ ಸರಕಾರದ ಆದೇಶದ ಅನ್ವಯ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್ 17(6)ಪ್ರಕಾರ ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರದ ಅನುಮೋದನೆಯೊಂದಿಗೆ ಹೆಸರನ್ನು ಪ್ರದರ್ಶಿಸುವ ಫಲಕಗಳ ಮೇಲಿನ ಅರ್ಧ ಭಾಗವು ಕನ್ನಡದಲ್ಲಿ ಇರತಕ್ಕದ್ದು ಎಂದು ತಿಳಿಸಲಾಗಿದೆ. ಇದಕ್ಕೆ ಮೊದಲು 2015ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ನಾಮಫಲಕದಲ್ಲಿ ಶೇಕಡ 60 ರಷ್ಟು ಭಾಗದ ಕನ್ನಡ ಭಾಷೆ ಅಕ್ಷರ ಹಾಗೂ ಶೇಕಡ 40ರಷ್ಟು ಇತರೆ ಭಾಷೆಯಲ್ಲಿ ಇರಬಹುದು ಎಂದು ತಿಳಿಸಲಾಗಿತ್ತು ಎಂದು ವಿವರಿಸಿದರು.

ಆದರೆ ಗಡಿ ತಾಲೂಕಾದ ಕಾರವಾರದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ, ಸರ್ಕಾರೇತರ, ಸ್ಥಳೀಯ ಸಂಸ್ಥೆಗಳ, ಬ್ಯಾಂಕು, ಧಾರ್ಮಿಕ ಕ್ಷೇತ್ರದಲ್ಲಿ,ವಾಣಿಜ್ಯ ಮಳಿಗೆ, ಎಲ್ಲ ಅಂಗಡಿ ಮುಂಗಟ್ಟುಗಳ, ಸಮಾಲೋಚನ ಕೇಂದ್ರಗಳ, ಆಸ್ಪತ್ರೆಗಳ, ಪ್ರಯೋಗಾಲಯಗಳ, ಮನೋರಂಜನ ಕೇಂದ್ರಗಳ ಶಾಲಾ ಕಾಲೇಜುಗಳ, ನಾಮಫಲಕದಲ್ಲಿ ಜಾಹೀರಾತು ಫಲಕದಲ್ಲಿ ಕೆಲವರು ಸರ್ಕಾರದ ಆದೇಶ ಪಾಲನೆ ಮಾಡಿದ್ದು ಕಂಡುಬಂದಿಲ್ಲ. ಆದ್ದರಿಂದ ಈ ಕೂಡಲೇ ಆದೇಶವನ್ನು ಬಲಪಡಿಸಲು ನಗರ ಹಾಗೂ ಗ್ರಾಮೀಣ ಪ್ರದೇಶದ ಅಧಿಕಾರಿಗಳಿಗೆಈ ಬಗ್ಗೆ ಕ್ರಮ ಕೈಗೊಳ್ಳಲು ಸೂಸಬೇಕು. ಕನ್ನಡ ಬಳಕೆ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಎಂದು ಎಚ್ಚರಿಕೆ ನೀಡಿದರು.

300x250 AD

ವೇದಿಕೆಯ ಜಿಲ್ಲಾ ಅಧ್ಯಕ್ಷ ಎನ್.ದತ್ತಾ, ದೀಪಕ ಕುಡಾಳಕರ, ಸುನೀಲ ನಾಯ್ಕ, ಮದನ ಗುನಗಿ, ಅಮಿತ ದುರ್ಗೆಕರ, ಪ್ರಸಾದ ಮಡಿವಾಳ, ಉದಯ ನಾಯ್ಕ, ಶಶಾಂಕ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top