Slide
Slide
Slide
previous arrow
next arrow

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಒಕ್ಕೂಟವು ಸದಸ್ಯರ ಸಮಸ್ಯೆಗಳ ಪರಿಹಾರಕ್ಕೆ ಸದಾ ಸಿದ್ಧ:ರಾಮಕೃಷ್ಣ ಕಡವೆ

300x250 AD

ಶಿರಸಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟವು ಸದಸ್ಯ ಸಂಘಗಳ ಹಾಗೂ ಸದಸ್ಯರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸದಾ ಪ್ರಯತ್ನಿಸುತ್ತಿದೆ ಎಂದು ಉತ್ತರಕನ್ನಡ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಒಕ್ಕೂಟದ ಹಾಗೂ ಟಿಆರ್‌ಸಿ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಹೇಳಿದರು.

ಅವರು ಗುರುವಾರ ಟಿಆರ್‌ಸಿ ಸಭಾಭವನದಲ್ಲಿ ನಡೆದ ಉತ್ತರಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟವಾದ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ನ 13ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2018ರಲ್ಲಿ ಘೋಷಣೆಯಾದ ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯ ಹಣ ಕೆಲ ಅರ್ಹ ಕೃಷಿಕರಿಗೆ ಇನ್ನೂ ದೊರೆಯದ ಬಗ್ಗೆ ಹಾಗೂ ನಿಲ್ಕುಂದ ತಂಡಾಗುಂಡಿ ಭಾಗದ ರೈತರ ಬೆಳೆವಿಮಾ ಪರಿಹಾರ ದೊರಕದಿರುವ ಬಗ್ಗೆ ಒಕ್ಕೂಟದ ಮೂಲಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಈಗ ನಿರ್ಣಾಯಕ ಹಂತದಲ್ಲಿದೆ ಎಂದರು. ಸರ್ಕಾರವು ಕೃಷಿಕರ ಬೆಟ್ಟ ಭೂಮಿಗಳನ್ನು’ಬ’ ಖರಾಬಗೊಳಿಸಿರುವುದನ್ನು ವಿರೋಧಿಸಿ ಒಕ್ಕೂಟದ ವತಿಯಿಂದ ಈಗಾಗಲೇ ಹೋರಾಟ ನಡೆಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಕಾರದೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಯಾವತ್ತೂ ಸಮಸ್ಯೆಗಳಿಗೆ ಸ್ಪಂದಿಸಲು ಒಕ್ಕೂಟವು ಸದಾ ಕಾರ್ಯತತ್ಪರವಾಗಿದೆ ಎಂದು ಅವರು ಹೇಳಿದರು.

ಒಕ್ಕೂಟದ ಕಾರ್ಯದರ್ಶಿ ಹಾಗೂ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ಬಿ ಹೆಗಡೆ ಮತ್ತೀಹಳ್ಳಿ ಮಾತನಾಡಿ, ಯಾವುದೇ ಸಮಸ್ಯೆಗಳನ್ನು ಸಂಘಟಿತವಾಗಿ ಪ್ರಯತ್ನಿಸಿದರೆ ಪರಿಹಾರವನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಒಕ್ಕೂಟದ ಮೂಲಕ ಈ ಹಿಂದಿನ ದಿನಗಳಲ್ಲಿ ಸರ್ಕಾರ, ಇಲಾಖೆಗಳ ಮಟ್ಟದಲ್ಲಿ ಹಾಗೂ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಮಟ್ಟದಲ್ಲಿ ಸದಸ್ಯ ಸಂಘಗಳಿಗೆ ಎದುರಾದ ಅನೇಕ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು. ಹೆಚ್ಚಿನ ಸದಸ್ಯ ಸಂಘಗಳು ಒಕ್ಕೂಟದ ಕಾರ್ಯಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಿದಲ್ಲಿ ಒಕ್ಕೂಟದ ಬಲವನ್ನು ಮತ್ತಷ್ಟು ಹೆಚ್ಚಿಸಬೇಕೆಂದು ಮನವಿ ಮಾಡಿದರು.

300x250 AD

ವೇದಿಕೆಯಲ್ಲಿ ಹೀಪನಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಜಿ.ಆರ್ ಹೆಗಡೆ, ಮೆಣ್ಸಿಕೇರಿ, ನೀರ್ನಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಮ್.ಎಸ್.ಹೆಗಡೆ ಇಟಗುಳಿ ಹಾಗೂ ಉಪ್ಪಿನಪಟ್ಟಣ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಿ.ಪಿ ಹೆಗಡೆ, ಕತಗಾಲ ಉಪಸ್ಥಿತರಿದ್ದರು. ಟಿ.ಆರ್.ಸಿ ಸಿಬ್ಬಂದಿ ಸುಷ್ಮಾ, ಪ್ರಶಾಂತಿ ಹಾಗೂ ಸ್ವಾತಿ ಪ್ರಾರ್ಥಿಸಿದರು. ಜಿ.ಜಿ.ಹೆಗಡೆ ಕುರುವಣಿಗೆ ನಿರ್ವಹಿಸಿದರು.

ಯಶಸ್ವಿನಿ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಆಗ್ರಹ
ಸಹಕಾರಿ ಸಂಘದ ಸದಸ್ಯರಿಗೆ ವಿಶೇಷವಾಗಿ ರೂಪಿಸಿದ ಯಶಸ್ವಿನಿ ಯೋಜನೆಯು ಸ್ಥಳಿಯವಾಗಿ ಹೆಚ್ಚಿನ ಆಸ್ಪತ್ರೆಗಳಲ್ಲಿ ಜಾರಿಗೊಳ್ಳುತ್ತಿಲ್ಲ ಹಾಗೂ ಯಶ್ವಸಿನಿ ಯೋಜನೆಯಲ್ಲಿ ದೊರಕುವ ಕ್ಲೇಂ ಹಣವು ತೀರಾ ಕಡಿಮೆ ಮೊತ್ತದ್ದಾಗಿದ್ದು, ಇವುಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Share This
300x250 AD
300x250 AD
300x250 AD
Back to top