Slide
Slide
Slide
previous arrow
next arrow

ಆರೋಗ್ಯ ಭಾಗ್ಯ ಯೋಜನೆಯನ್ನು ನಿವೃತ್ತರಿಗೆ ಜಾರಿಗೊಳಿಸಲು ಡಾ.ಎಲ್.ಭೈರಪ್ಪ ಆಗ್ರಹ

300x250 AD

ಕಾರವಾರ: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ 4.2 ಲಕ್ಷ ಪಿಂಚಣಿದಾರರಿದ್ದಾರೆ. ಒಂದು ಲಕ್ಷ ಕುಟುಂಬ ಪಿಂಚಣಿದಾರರಿದ್ದಾರೆ. ಆರೋಗ್ಯ ಭಾಗ್ಯ ಯೋಜನೆಯನ್ನು ನಿವೃತ್ತರಿಗೆ ಜಾರಿಗೊಳಿಸಬೇಕೆಂದು ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಎಲ್ ಭೈರಪ್ಪ ಆಗ್ರಹಿಸಿದರು.

ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸರ್ಕಾರಿ ನಿವೃತ್ತ ನೌಕರರ ಸಂಘದ ನೂತನ ದಿ. ಡಿ.ಜಿ. ಸಾವಂತ್ ಸಭಾಭವನ ಉದ್ಘಾಟನೆ ಹಾಗೂ ಜಿಲ್ಲಾ ಸಮಾವೇಶ, ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರಕಾರಿ ನೌಕರರ, ನಿವೃತ್ತ ಸರಕಾರಿ ನೌಕರರ ಹಾಗೂ ಕುಟುಂಬ ಪಿಂಚಣಿದಾರರ ವೇತನ ಬತ್ತೆಗಳನ್ನು ಪರಿಷ್ಕರಿಸಲು ಸುಧಾಕರ ಸಮಿತಿ ರಚನೆಯಾಗಿ ಒಂದು ವರ್ಷವಾಗಿದೆ. ಆಯೋಗವು ಜನವರಿ ಅಂತ್ಯದೊಳಗೆ ತಮ್ಮ ವರದಿ ಸಲ್ಲಿಸಲಿದ್ದು, ಸರಕಾರ ಆದಷ್ಟು ಬೇಗನೆ ಏಳನೇ ವೇತನ ಆಯೋಗದ ವರದಿಯನ್ನು ಶೀಘ್ರದಲ್ಲಿ ಪಡೆದು 2024ರ ಏಪ್ರಿಲ್ 1ರಿಂದ ಪರಿಷ್ಕೃತ ವೇತನ ಜಾರಿ ಮಾಡಬೇಕು. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಗೊಳಿಸಲು ಸಂಘದಿಂದ ಕಾರ್ಯಗಾರ, ರಾಜ್ಯಮಟ್ಟದ ಸಮಾವೇಶವನ್ನು ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.

300x250 AD

ರಾಜ್ಯ ಸರಕಾರಿ ನೌಕರ ಸಂಘದ ಉಪಾಧ್ಯಕ್ಷ, ಜಿಲ್ಲಾಧ್ಯಕ್ಷ ಸಂಜೀವ್ ನಾಯಕ ಮಾತನಾಡಿ, ನಿವೃತ್ತ ನೌಕರ ಸಂಘದ ಮೇಲ್ಮಹಡಿ ನಿರ್ಮಾಣಕ್ಕೆ ನಿವೃತ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ.ಹೆಗಡೆ ಅವರ ಶ್ರಮ ಅಪಾರವಾಗಿದೆ. ಅದೇ ರೀತಿ ನಿವೃತ್ತ ನೌಕರರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಿವೃತ್ತ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಸಂಘದ 80 ವರ್ಷಕ್ಕೂ ಮೇಲ್ಪಟ್ಟ ಹಿರಿಯ ಸದಸ್ಯರನ್ನು ಸಭೆಯಲ್ಲಿ ಗೌರವ ಸನ್ಮಾನಿಸಲಾಯಿತು .ಕೇಂದ್ರ ಸಂಘದ ಖಜಾಂಚಿ ಆನಂದಪ್ಪ, ಉಪಾಧ್ಯಕ್ಷೆ, ಶಾರದಮ್ಮ, ನಂಜುಂಡಪ್ಪ, ಜಿಲ್ಲಾ ಗೌರವಾಧ್ಯಕ್ಷ ಶಿವಾನಂದ ಕದಂ, ಉಪಾಧ್ಯಕ್ಷ ಚಂದ್ರಕಾಂತ್ ದಳವಿ, ಸಿ.ಎಸ್. ಗೌಡರ ಕಾರ್ಯದರ್ಶಿ ಅನಿಲ್ ನಾಯಕ್, ಕಟ್ಟಡ ಸಮಿತಿಯ ಕಾರ್ಯದರ್ಶಿ ಎಲ್.ಕೆ.ನಾಯಕ್, ಸತೀಶ ಗೋಸಾವಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top