ಕಾರವಾರ: ಕುಮಟಾ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸ್ವ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ 18 ರಿಂದ 45 ವರ್ಷದ ನಿರುದ್ಯೋಗಿ ಯುವಕ ಯುವತಿಯರಿಗೆ ಜನವರಿ 4 ರಿಂದ ಫೆಬ್ರವರಿ 2 ರವರೆಗೆ ಟ್ಯಾಲಿ, ಜಿಎಸ್ಟಿ, ಆದಾಯ ತೆರಿಗೆ, ಟಿಡಿಎಸ್, ಉದ್ಯಮಶೀಲತೆ ತರಬೇತಿ ಹಮ್ಮಿಕೊಳ್ಳಲಾಗಿದೆ.
ಕನಿಷ್ಟ ವಿದ್ಯಾರ್ಹತೆ: ಕನ್ನಡ ಮತ್ತು ಇಂಗ್ಲೀಷ್ ಓದಲು ಬರೆಯಲು ಬರಬೇಕು ಮತ್ತು ತರಬೇತಿಗೆ ಅನುಗುಣವಾಗಿ ಕನಿಷ್ಠ ಜ್ಞಾನವಿರಬೇಕು.
ಆಸಕ್ತ ಅಭ್ಯರ್ಥಿಗಳು ನಿರ್ದೇಶಕರು, ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಇಂಡಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ -581343 ಉತ್ತರಕನ್ನಡ ಜಿಲ್ಲೆ ಇವರಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ TEL:+919538281989, TEL:+919916783825, TEL:+919449860007 ,TEL:+918880444612, TEL:+919620962004, ಸಂಪರ್ಕಿಸಬಹುದು ಎಂದು ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.