Slide
Slide
Slide
previous arrow
next arrow

ಪರಿಸರದ ಅಸಮತೋಲನಕ್ಕೆ ಕಾಡಿನ ನಾಶ ಮೂಲ ಕಾರಣವಾಗಿದೆ: ಅದಿತಿ ರಾವ್

300x250 AD

ಶಿರಸಿ: ಭೂಮಿಯಲ್ಲಿ ಸುಮಾರು ಎಂಟು ಬಿಲಿಯನ್ ಜನರು ಇಂದು ವಾಸ ಮಾಡುತ್ತಿದ್ದಾರೆ. ಮಾನವರ ಜನಸಂಖ್ಯೆಗೆ ಹೋಲಿಸಿದರೆ ಭೂಮಿಯಲ್ಲಿ ಉಳಿಯಬಹುದಾದ ಜೀವಿಸಬಹುದಾದ ಸ್ಥಳದ ಪ್ರಮಾಣ ಕಡಿಮೆ ಇದೆ. ಮಾನವರ ಜೊತೆಗೆ ಪ್ರಾಣಿ-ಪಕ್ಷಿ ಸೂಕ್ಷ್ಮಾಣು ಜೀವಿಗಳು ಇವುಗಳೆಲ್ಲವೂ ಕೂಡ ವಾಸಿಸುತ್ತಿವೆ. ನಾವು ಬದುಕುವುದರ ಜೊತೆಗೆ ಇವುಗಳನ್ನು ಕೂಡ ಬದುಕಲು ಬಿಡಬೇಕು ಇವುಗಳನ್ನು ರಕ್ಷಿಸಬೇಕು ಎಂದು ಪುಣೆಯ ಇನ್ಸ್ಟಿಟ್ಯೂಟ್ ಆಫ್ ಎನ್ವಿರಾನ್ಮೆಂಟ್ ಎಜ್ಯುಕೇಶನ್ ಮತ್ತು ರಿಸರ್ಚ್ ನ ಸಂಶೋಧನಾರ್ಥಿ ಅದಿತಿ ರಾವ್ ಹೇಳಿದರು.

ಅವರು ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾಲೇಜಿನ ಐಕ್ಯುಎಸಿ ವಿಭಾಗ, ರಸಾಯನ ಶಾಸ್ತ್ರ ಹಾಗೂ ಪ್ರಾಣಿ ಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇವತ್ತು ಮಾನವನಾದವನು ಅಭಿವೃದ್ಧಿಯ ಹೆಸರಲ್ಲಿ ಕಾಡಿನ ನಾಶ ಮಾಡುತ್ತಿದ್ದಾನೆ. ಅಭಿವೃದ್ಧಿ ಮಾಡಬೇಕಾದರೆ ಪರಿಸರ ಮಾಲಿನ್ಯ ಜೀವವೈವಿಧ್ಯತೆಯ ನಾಶ ಆಗುವುದು ಸರ್ವೇಸಾಮಾನ್ಯ ಎಂಬ ಭಾವನೆ ಇದೆ. ಆದರೆ ಇದು ತಪ್ಪು ಇವತ್ತು ಸಿಂಗಾಪುರದಂತಹ ಮುಂದುವರೆದ ದೇಶಗಳಲ್ಲಿ ತಮ್ಮ ನಗರಗಳನ್ನು ಬೆಳೆಸಿಕೊಳ್ಳುತ್ತಿರುವುದರ ಜೊತೆಗೆ ಅಲ್ಲಿನ ಅರಣ್ಯ ಸಂಪತ್ತನ್ನು ಕೂಡ ಕಾಪಾಡಿಕೊಂಡು ಬರುತ್ತಿದ್ದಾರೆ.

ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡ 50ರಷ್ಟು ಅರಣ್ಯವಿದೆ. ಆದರೆ ಅದನ್ನು ನಾವು ಕಳೆದುಕೊಳ್ಳುವಂತಹ ಸಂದಿಗ್ದ ಸ್ಥಿತಿಯಲ್ಲಿದ್ದೇವೆ. ವೈಲ್ಡ್ ಲೈಫನ್ನು ಉಳಿಸಿಕೊಳ್ಳಲು ವಿಫಲವಾಗುತ್ತಿದ್ದೇವೆ. ವೈಲ್ಡ್ ಲೈಫ್ ಅನ್ನು ಸಂರಕ್ಷಿಸುವುದೆಂದರೆ ಬರಿ ಗಿಡಗಳನ್ನು ನೆಡುವುದಲ್ಲ ಬದಲಾಗಿ ಹುಲ್ಲುಗಾವಲು ಪ್ರದೇಶಗಳನ್ನು ಗುಡ್ಡಗಾಡು ಪ್ರದೇಶಗಳನ್ನು ಅರಣ್ಯ ಪ್ರದೇಶಗಳನ್ನು ಹಾಗೂ ಇವುಗಳ ಜೊತೆಗೆ ಅಲ್ಲಿನ ಪ್ರಾಣಿ ಪಕ್ಷಿ ಸೂಕ್ಷ್ಮ ಜೀವಿಗಳನ್ನು ರಕ್ಷಿಸುವುದಾಗಿದೆ ಎಂದು ಹೇಳಿದರು.

300x250 AD

ಕಾಲೇಜಿನ ಐಕ್ಯೂಎಸ್‌ಸಿ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಭಟ್ ಸ್ವಾಗತಿಸಿ, ಮಾತನಾಡಿ ಪ್ರತಿ ವರ್ಷವೂ ಕೂಡ ನಾವು ವನ್ಯಜೀವಿ ಸಂರಕ್ಷಣೆಯ ಕುರಿತಾಗಿ ಅದರ ಜಾಗೃತಿಯನ್ನು ಮೂಡಿಸುವ ಸಲುವಾಗಿ ವನ್ಯಜೀವಿ ಸಂರಕ್ಷಣಾ ದಿನವನ್ನು ಆಚರಿಸುತ್ತಾ ಬರುತ್ತಿದ್ದೇವೆ. ಹೀಗಾಗಿ ಅರಣ್ಯ ಇಲಾಖೆ ಮತ್ತು ಪರಿಸರ ಸಂರಕ್ಷಣಾ ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿ ವರ್ಷವೂ ಅರಣ್ಯ ಸಂರಕ್ಷಣೆಯ ಬಗ್ಗೆ ಕ್ವಿಜ್ ಗಳು, ಚರ್ಚೆ, ರಸಪ್ರಶ್ನೆ ಸ್ಪರ್ಧೆಗಳನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸುತ್ತಾ ಬಂದಿದ್ದೇವೆ. ಇವೆಲ್ಲದವುಗಳ ಹಿಂದಿನ ಮುಖ್ಯ ಉದ್ದೇಶವೇ ವನ್ಯಜೀವಿ ಹಾಗೂ ಜೀವವೈವಿಧ್ಯ ಪರಿಸರವನ್ನು ಉಳಿಸುವುದಾಗಿದೆ ಎಂದು ಹೇಳಿದರು.

ಕೃಷಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಅನೇಕ ಪರಿಸರವಾದಿಗಳಂತಹ ಸಂಸ್ಥೆಗಳು ಜೀವ ವೈವಿಧ್ಯತೆಯ ಉಳಿವಿಗಾಗಿ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ವೈಲ್ಡ್ ಲೈಫ್ ಎನ್ನುವುದು ಕೇವಲ ಪ್ರಾಣಿ ಶಾಸ್ತ್ರ ಹಾಗೂ ರಸಾಯನ ಶಾಸ್ತ್ರಕ್ಕೆ ಮಾತ್ರ ಸೀಮಿತವಾಗಿಲ್ಲ ಇವತ್ತು ಮಾನವನಾದವನು ನಮ್ಮ ಜೀವ ವೈವಿಧ್ಯವನ್ನು ಹಾನಿಗೆ ಒಳಪಡಿಸುತ್ತಿದ್ದಾನೆ ಕಾಡುಪ್ರಾಣಿಗಳಿಂದ ಸಿಗುವ ಚರ್ಮ, ದಂತಗಳು, ಹುಲಿಯು ಗುರುಗಳು ಇವುಗಳಿಂದ ಮಾನವ ತೋರಿಕೆಯ ಬದುಕನ್ನು ನಡೆಸುತ್ತಿದ್ದಾನೆ. ಪ್ರಾಣಿಗಳಿಂದ ಮನರಂಜನೆಯನ್ನು ಪಡೆದುಕೊಳ್ಳುತ್ತಿದ್ದಾನೆ ಆದರೆ ಹೀಗೆ ಆಗಬಾರದು. ಜೀವ ವೈವಿಧ್ಯತೆಯ ವ್ಯವಸ್ಥೆಯಲ್ಲಿ ಎಲ್ಲ ಪ್ರಾಣಿ ಪಕ್ಷಿಗಳು ಕೀಟಗಳು ಸೂಕ್ಷ್ಮಾಣು ಜೀವಿಗಳು ಸಮವಾಗಿವೆ ಇವುಗಳನ್ನು ಉಳಿಸುವ ಪ್ರಯತ್ನ ನಮ್ಮದಾಗಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರೊ. ದಿವ್ಯಾ ನಿರೂಪಿಸಿ, ವಂದಿಸಿದರು.

Share This
300x250 AD
300x250 AD
300x250 AD
Back to top