ಶಿರಸಿ: ಸಿಂಗಾಪುರದಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎರಡನೆ ವಿಶ್ವ ಕನ್ನಡ ಹಬ್ಬಕ್ಕೆ ಶಿರಸಿಯ ಕದಂಬ ಕಲಾ ವೇದಿಕೆಯ ಹೆಸರಾಂತ ಗಾಯಕ ಹಾಗು ಬಹುಮುಖ ಪ್ರತಿಭೆ ರತ್ನಾಕರ ನಾಯ್ಕ ಮತ್ತು ದಿವ್ಯಾ ಶೇಟ್ ಆಯ್ಕೆಯಾಗಿದ್ದು,ಈ ಹಿನ್ನಲೆಯಲ್ಕಿ ಶಾಸಕ ಭೀಮಣ್ಣ ಟಿ ನಾಯ್ಕ ಮಳಲಗಾಂವ್ ನಲ್ಲಿ ವಿಶ್ವ ಕನ್ನಡ ಹಬ್ಬದ ಭಿತ್ತಿಚಿತ್ರವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಶ್ವ ಕನ್ನಡ ಹಬ್ಬಕ್ಕೆ ಉತ್ತರಕನ್ನಡ ಜಿಲ್ಲೆಯಿಂದ ನನ್ನ ಕ್ಚೇತ್ರದ ರತ್ನಾಕರ ಮತ್ತು ದಿವ್ಯಾ ಆಯ್ಕೆಯಾಗಿರುವದಕ್ಕೆ ನಾನು ಅವರನ್ನು ಜಿಲ್ಲೆಯ ಜನರ ಪರವಾಗಿ ಅಭಿನಂದಿಸುತ್ತೇನೆ. ನಮ್ಮ ಜಿಲ್ಕೆಯ ಗಾಯಕರ ನಾದ ಮಾಧುರ್ಯ ಸಿಂಗಾಪುರದ ಕನ್ನಡಿಗರಿಗೆ ತಲುಪಿಸುವಂತೆ ಮಾಡುತ್ತಿರುವ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗೂ ಕೂಡಾ ಅಭಿನಂದಿಸುವುದಾಗಿ ತಿಳಿಸಿದರು. ನಮ್ಮಲ್ಲಿ ಅನೇಕ ಪ್ರತಿಭಾವಂತರಿದ್ದಾರೆ.ಅದರಲ್ಲಿ ರತ್ನಾಕರ ಮತ್ತು ದಿವ್ಯಾ ಕೂಡಾ ಹೌದು.ಅವರಿಗೆ ಭವಿಷ್ಯದಲ್ಲಿ ಇನ್ನಷ್ಟು ವೇದಿಕೆ ಕಲ್ಪಿಸುವಂತಾಗಲೆಂದು ಶುಭ ಹಾರೈಸಿ, ಕಲಾವಿದರಿಗೆ ಶಾಲು ಹೊದೆಸಿ ಸನ್ಮಾನಿಸಿ ಗೌರವಿಸಿದರು.