Slide
Slide
Slide
previous arrow
next arrow

ವಿದ್ಯುತ್ ಕೇಬಲ್ ಅಳವಡಿಕೆಯಿಂದ ಹದಗೆಟ್ಟ ಬರ್ಚಿ ರಸ್ತೆ : ದುರಸ್ತಿಗೆ ಆಗ್ರಹ

300x250 AD

ದಾಂಡೇಲಿ : ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ವಿದ್ಯುತ್ ಕೇಬಲ್ ಅಳವಡಿಕೆಗಾಗಿ ನಗರದ ಬರ್ಚಿ ರಸ್ತೆಯ ಬದಿಯಲ್ಲಿ ರಸ್ತೆ ಅಗೆದು ಕೇಬಲ್ ಅಳವಡಿಸಿ ಮುಚ್ಚಾಗಿದ್ದರೂ, ಸಮರ್ಪಕವಾಗಿ ಮುಚ್ಚಿ ಡಾಂಬರೀಕರಣ ಮಾಡದೇ ಇರುವುದರಿಂದ ಅಲ್ಲಲ್ಲಿ ಹೊಂಡ – ಗುಂಡಿಗಳು ನಿರ್ಮಾಣವಾಗಿ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ಬರ್ಚಿ ರಸ್ತೆಯಲ್ಲಿ ಬರುವ ಬಾಂಬುಗೇಟ್ ಹತ್ತಿರ ರಸ್ತೆ ತೀವ್ರ ಹದಗೆಟ್ಟು ಹೊಂಡ – ಗುಂಡಿಗಳು ನಿರ್ಮಾಣವಾಗಿ ಪ್ರತಿನಿತ್ಯ ಒಂದಲ್ಲ ಒಂದು ವಾಹನಗಳು ಅಪಘಾತಕ್ಕೀಡಾಗುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ರಸ್ತೆ ದುರಸ್ತಿಗಾಗಿ ಸಾಕಷ್ಟು ಬಾರಿ ಸ್ಥಳೀಯರು ಮನವಿಯನ್ನು ಮಾಡಿದರೂ, ಸಂಬಂಧಪಟ್ಟವರು ಅಗತ್ಯ ಕ್ರಮವನ್ನು ಕೈಗೊಳ್ಳುತ್ತಿಲ್ಲ.

300x250 AD

ಇಲ್ಲಿಯ ರಸ್ತೆ ದುರಸ್ತಿಗೆ ಕೂಡಲೇ ಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಗುರುವಾರ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top