Slide
Slide
Slide
previous arrow
next arrow

ಬೈಕ್ ಸ್ಕಿಡ್: ಸವಾರ ಗಂಭೀರ

300x250 AD

ಜೋಯಿಡಾ: ತಾಲ್ಲೂಕಿನ ರಾಮನಗರದಿಂದ ಗೋವಾಕ್ಕೆ ಹೋಗುತ್ತಿದ್ದ ದ್ವಿಚಕ್ರ ವಾಹನವೊಂದು ಸವಾರನ ಅತೀಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಸ್ಕಿಡ್ ಆಗಿ ಬಿದ್ದು, ಸವಾರ ಗಂಭೀರ ಗಾಯಗೊಂಡ ಘಟನೆ ಜೋಯಿಡಾ ತಾಲ್ಲೂಕಿನ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಲಕೋಡ ಟೋಲ್ ನಾಕಾದ ಹತ್ತಿರ ನಡೆದಿದೆ.

ಗೋವಾ ರಾಜ್ಯದ ಮಡಗಾಂವ್ ಇಲ್ಲಿಯ ಮೋತಿ ಡೊಂಗರ್ ನಿವಾಸಿ ಇರ್ಷಾದ್ ಅಲಿ ಹಜರತ್ ಸಾಬ್ ನದಾಫ್ ಎಂಬಾತನೇ ಗಾಯಗೊಂಡ ವಾಹನ ಸವಾರನಾಗಿದ್ದಾನೆ. ಈತ ಜಿ ಎ: 08, ಜೆ- 3861 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ‌ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಪರಿಣಾಮವಾಗಿ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಗಾಯಗೊಂಡ ಈತನನ್ನು ತಕ್ಷಣವೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top