Slide
Slide
Slide
previous arrow
next arrow

ಇಂದು ದಾಂಡೇಲಿಯ ಶ್ರೀವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವಿಸ್ತ್ರತ ಬೈಠಕ್ : ಚಂದ್ರು ಮಾಳಿ

300x250 AD

ದಾಂಡೇಲಿ : ಅಯೋಧ್ಯೆಯಲ್ಲಿ ಭವ್ಯರಾಮ ಮಂದಿರದ ನಿರ್ಮಾಣವಾಗಿ, 2024ರ ಜನವರಿ22 ರಂದು ಪ್ರಭು ಶ್ರೀರಾಮನ ಪ್ರತಿಷ್ಠಾಪನಾ ಪೂಜಾ‌ ಕಾರ್ಯ ನಡೆಯಲಿರುವುದರಿಂದ ಮನೆ ಮನೆಗಳಿಗೆ ಅಕ್ಷತೆ, ಆಮಂತ್ರಣ ಪತ್ರಿಕೆ ಮತ್ತು ಶ್ರೀರಾಮನ ಭಾವಚಿತ್ರ ಹಂಚಿಕೆ ಮಾಡುವುದರ ಬಗ್ಗೆ ಚರ್ಚೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಇಂದು ಬುಧವಾರ ಸಂಜೆ 6:30 ಕ್ಕೆ ನಗರದ ಶ್ರೀ.ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವಿಸ್ತ್ರತ ಬೈಠಕ್ ಸಭೆಯನ್ನು ನಡೆಸಲು ಸಂಘಪರಿವಾರದ ಹಿರಿಯರು ನಿರ್ಣಯಿಸಿರುತ್ತಾರೆ ಎಂದು ಬಜರಂಗ ದಳದ ಜಿಲ್ಲಾ ಸುರಕ್ಷ ಪ್ರಮುಖ ಚಂದ್ರು ಮಾಳಿಯವರು ತಿಳಿಸಿದ್ದಾರೆ.

ಈ ಸಭೆಯಲ್ಲಿ ಸಂಘ ಪರಿವಾರದ ಪ್ರಮುಖರು, ಸದಸ್ಯರು, ಮುಖಂಡರು, ನಗರದ ರಾಮಭಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಚಂದ್ರು ಮಾಳಿಯವರು‌ ಮನವಿ ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top