ಶಿರಸಿ: ಆರ್ಥಿಕತೆಯನ್ನು ಬದಿಗೊತ್ತಿ ನೀಡಿರುವ ಗ್ಯಾರಂಟಿ ಸ್ಕೀಮ್ ಗಳು ಕರ್ನಾಟಕ ಜನೆತೆಗೆ ಮಾಡಿರುವ ದೊಡ್ಡ ದ್ರೋಹ. ಪುಕ್ಕಟೆ ಹೆಸರಿನಲ್ಲಿ ಬಹುಸಂಖ್ಯಾತ ಜನರನ್ನು ವಂಚಿಸುವ ಸರ್ಕಾರ ಇದಾಗಿದೆ ಸಂಸದ ಅನಂತಕುಮಾರ ಹೆಗಡೆ ಖಾರವಾಗಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಅನುದಾನ ನೀಡುತ್ತಿಲ್ಲ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದರು. ಕೇಂದ್ರ ಸರ್ಕಾರದ ಬಳಿ ಅನುದಾನ ಕೇಳಲು ಅದಕ್ಕೆ ಆದಂತಹ ರೂಪು ರೇಷೆಗಳಿದೆ. ಸರಿಯಾದ ಯೋಜನೆಯನ್ನು ಹಾಕಿಕೊಂಡು ಕೇಳಲಿ. ಕಾರಣ ಈ ಕುರಿತು ಸಿದ್ಧರಾಮಯ್ಯ ಯೋಚನೆ ಮಾಡಿಕೊಂಡು ಮಾತನಾಡಲಿ. ಇದು ಕರ್ನಾಟಕವಲ್ಲ. ಮೋದಿ ಸರ್ಕಾರ. ಕಾರಣ ಪ್ರತಿಯೊಂದು ಅನುದಾನಕ್ಕೂ ಲೆಕ್ಕ ಕೇಳಿ ನೀಡುತ್ತದೆ. ಸೋಗಲಾಡಿ ಸಿದ್ಧನ ಯೋಜನೆಯನ್ನು ಯಾರೂ ಒಪ್ಪುವುದಿಲ್ಲ. ಮನಸ್ಸಿನ ಬಂದಾಗ ಕೇಂದ್ರದ ಬಳಿ ದುಡ್ಡು ಕೇಳಿದಲ್ಲಿ ನೀಡಲು ಅದು ಸಿದ್ದನ ಅಪ್ಪನ ಆಸ್ತಿಯಲ್ಲ ಎಂದು ಅವರು ಹೇಳಿದರು.
ಸಂಸತ್ತಿನ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿದ ಹೆಗಡೆ, ವಿರೋಧ ಪಕ್ಷಗಳಿಗೆ ಬೇರೆ ವಿಷಯಗಳು ಇಲ್ಲ. ಅನವಶ್ಯಕ ವಿಷಯ ಕೈಗೆತ್ತಿಕೊಂಡು ದೊಡ್ಡದು ಮಾಡುವ ಕೆಲಸ ಮಾಡಲಾಗುತ್ತಿದೆ. ಸಂಸತ್ತಿನಲ್ಲಿ ಬೇಡದೇ ಇರುವ ಕೆಲಸ ಮಾಡಿದಲ್ಲಿ ತೆಗೆದು ಬೀಸಾಡುತ್ತಾರೆ. ಸಂಸತ್ತಿನ ಘನತೆ ಗೌರವಕ್ಕೆ ಚ್ಯುತಿ ತರುವ ಕೆಲಸ ಮಾಡಿದಾಗ ಸಭಾಧ್ಯಕ್ಷರಿಗೆ ಅಧಿಕಾರ ಇದೆ. ಅವರು ತಿರ್ಮಾನ ಮಾಡ್ತಾರೆ. ಯಾರೂ ಟೆಕನ್ ಫಾರ್ ಗ್ರಾಂಟೆಂಡ್ ಎಂದು ತಿಳಿಯಬಾರದು ಎಂದರು. ಸಂಸತ್ ಪ್ರವೇಶಕ್ಕೆ ಪತ್ರ ನೀಡಿದ ಪ್ರತಾಪ್ ಸಿಂಹ ಅವರ ವಿಷಯವಾಗಿ ತನಿಖೆ ನಡೆದಿದೆ ಎಂದರು.
ಬಿ.ಕೆ.ಹರಿಪ್ರಸಾದ್ ಅವರ ಬೂಟು ನೆಕ್ಕುವಿಕೆ ಹೇಳಿಕೆಗೆ, ಆ ಮಟ್ಟಕ್ಕೆ ಇಳಿದು ಉತ್ತರ ನೀಡಲು ಸಾಧ್ಯವಿಲ್ಲ. ಅವರ ಬಳಿಯೇ ಉತ್ತರ ಸಿಗಬಹುದು ಎಂದರು. ಇನ್ನು ದೆಹಲಿಗೆ ಹೋಗುವುದರಲ್ಲಿ ವಿಶೇಷ ಇಲ್ಲ. ಅಲ್ಲಿ ದೊಡ್ಡವರೂ ಸಿಗುತ್ತಾರೆ. ಎಲ್ಲವೂ ಸಹಜ ಭೇಟಿ ಎಂದು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೂರರಲ್ಲಿ ಎರಡಷ್ಟು ಬಹುಮತವನ್ನು ಬಿಜೆಪಿ ಗಳಿಸಲಿದೆ. ಕರ್ನಾಟಕದಲ್ಲಿ ಭವಿಷ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಈ ದಿವಾಳಿಕೋರ ಸರ್ಕಾರದಲ್ಲಿ ಜನರಿಗೆ ಇರಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ನೆಮ್ಮದಿ ಇಲ್ಲ ಎಂದ ಹೆಗಡೆ, ಜನರು ನೋವನ್ನು ಅನುಭವಿಸುತ್ತಿದ್ದಾರೆ ಎಂದರು.
ಹೊಸದಾಗಿ ಹುಟ್ಟಿಕೊಂಡಿರುವ ಇಂಡಿಯಾ ಜನರ ದಿಕ್ಕು ತಪ್ಪಿಸುವ ಕೆಲಸವಾಗಿದೆ. ಇದು ಕಾಂಗ್ರೆಸ್ ನ ರೀತಿ. ದೇಶಕ್ಕೆ ದಾನ ಮಾಡಿ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ದೇಶವನ್ನು ಕಾಂಗ್ರೆಸ್ ಗುತ್ತಿಗೆ ಪಡೆದುಕೊಂಡಿದೆಯೇ ? ಕಾಂಗ್ರೆಸ್ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಸದರು, ಕಾಂಗ್ರೆಸ್ ಜಾತಿಯ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಜ್ಯಾತ್ಯಾತೀತ ಹೇಳುವುದು ಕಾಂಗ್ರೆಸ್ ಷಡ್ಯಂತ್ರ. ದೇಶ ಒಡೆಯುವ ಕೆಲಸ ಕಾಂಗ್ರೆಸ್ ನಿಂದ ಆಗುತ್ತಿದೆ ಎಂದರು.