
ಶಿರಸಿ: ಇಲ್ಲಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎ ಪ್ರಥಮ ವರ್ಷದಲ್ಲಿ ಓದುತ್ತಿರುವ ಉಷಾ ಸ್ವಾದಿ ಇವಳು ಚೆನ್ನೈದಲ್ಲಿ ಜರುಗಲಿರುವ ಅಂತರ ವಿಶ್ವವಿದ್ಯಾಲಯ ಚೆಸ್ ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡವನ್ನು ಪ್ರತಿನಿಧಿಸಲಿದ್ದಾಳೆ.
ಇವಳು ಸೋಂದಾದ ರವಿ ಸ್ವಾದಿ ಹಾಗೂ ಸರೋಜಾ ಸ್ವಾತಿ ಇವರ ಪುತ್ರಿಯಾಗಿದ್ದಾಳೆ. ಇವಳ ಈ ಸಾಧನೆಗೆ ಎಂಇಎಸ್ ಅಧ್ಯಕ್ಷ ಜಿ. ಎಂ.ಹೆಗಡೆ ಮುಳಖಂಡ, ಕಾಲೇಜು ಉಪ ಸಮಿತಿ ಅಧ್ಯಕ್ಷ ಎಸ್. ಕೆ. ಭಾಗವತ್, ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.