Slide
Slide
Slide
previous arrow
next arrow

ವೇದ ಮಾರ್ಗದಲ್ಲಿ ಎಲ್ಲರ ಬದುಕು ಸಾಗಬೇಕು; ವೇ.ಗೋಪಾಲಕೃಷ್ಣ ಭಟ್ಟ

300x250 AD

ಯಲ್ಲಾಪುರ: ತಾಲೂಕಿನ ಗುಂಡ್ಕಲ್ ನ ಶಿವಗಂಗಾ ಆವಾರದಲ್ಲಿ ಶ್ರೀ ರಾಮತಾರಕ ಮಂತ್ರ ಹವನ, ಶ್ರೀ ದತ್ತಾತ್ರೇಯ ಮೂಲಮಂತ್ರ ಹವನ, ಧನ್ವಂತರಿ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ವಿದ್ವಾಂಸ, ಘನಪಾಠಿ ವೇ.ಗೋಪಾಲಕೃಷ್ಣ ಭಟ್ಟ ಆನಗೋಡ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಘನಪಾಠಿ ಗೋಪಾಲಕೃಷ್ಣ ಭಟ್ಟ ಮಾತನಾಡಿ, ವೇದಾಧ್ಯಯನ ಮಾಡುವುದು, ಅಧ್ಯಯನ ಮಾಡುವವರನ್ನು ಪ್ರೋತ್ಸಾಹಿಸುವುದು ಹಾಗೂ ಅಧ್ಯಯನ ಮಾಡಿದವರನ್ನು ಗೌರವಿಸುವುದು ವೇದ ಸೇವೆ ಎನಿಸುತ್ತದೆ. ಅಂತಹ ವೇದ ಮಾರ್ಗದಲ್ಲಿ ನಮ್ಮ ಬದುಕು ಸಾಗಬೇಕು ಎಂದರು. ವೇದಾಧ್ಯಯನ ಮಾಡಿದ ವಿದ್ವಾಂಸರು ಕಾರ್ಯಕ್ರಮಗಳಿಗೆ ಹೋದರೆ ಸಾಕಷ್ಟು ಸಂಪಾದಿಸಬಹುದು. ಅಷ್ಟಕ್ಕೆ ಸೀಮಿತವಾಗದೇ ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಹೇಳಿಕೊಟ್ಟು ವೇದ ಸಂತತಿಯನ್ನು ಬೆಳೆಸುವ ಕಾರ್ಯ ಮಾಡಬೇಕು. ವೇದ ಪಂಡಿತರು ಊರಿನಲ್ಲಿ ನೆಲೆಸಿ ಊರಿನ ಸಂಪತ್ತಾಗಿ ಬೆಳೆಯಬೇಕು. ವೇದಕ್ಕೆ ಆದಿ ಅಂತ್ಯಗಳಿಲ್ಲ. ಅಂತಹ ಶ್ರೇಷ್ಠ ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದು ಅವರು ಹೇಳಿದರು.

ವಿದ್ವಾನ್ ಗಣಪತಿ ಭಟ್ಟ ಕಿಬ್ಬಳ್ಳಿ ಮಾತನಾಡಿ, ವೇದ ಗುರು ಶಿಷ್ಯ ಪರಂಪರೆಯ ಮೂಲಕ ಸತ್ವಯುತವಾಗಿ, ಮೂಲ ಸ್ವರೂಪದಲ್ಲಿ ಉಳಿದುಕೊಂಡು ಬಂದಿದೆ. ನಿತ್ಯದ ಅನುಷ್ಠಾನಗಳನ್ನು, ಆಚರಣೆಗಳನ್ನು ಅನುಸರಿಸದೇ ಇದ್ದವರು ಮಾಡುವ ಧಾರ್ಮಿಕ ಕಾರ್ಯಕ್ರಮಗಳು ಕೇವಲ ಪ್ರದರ್ಶನವಾಗುತ್ತದೆ ಎಂದರು. ವೈದಿಕ ಸಂಸ್ಕೃತಿ ಮುಂದುವರಿಯಬೇಕು. ವೇದ ಪಾರಾಯಣಗಳು ಅಲ್ಲಲ್ಲಿ ನಡೆದರೆ ಮಾತ್ರ ವೇದ ವಿದ್ವಾಂಸರಿಗೆ ಗೌರವ ನೀಡಿದಂತೆ ಎಂದು ಹೇಳಿದರು. ವೇ.ವಿಶ್ವನಾಥ ಭಟ್ಟ ಬೆಳಖಂಡ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸರಾದ ವಿದ್ವಾನ್ ನಾರಾಯಣ ಭಟ್ಟ ಮೊಟ್ಟೆಪಾಲ, ವೇ.ಮಂಜುನಾಥ ಭಟ್ಟ ಮೊಟ್ಟೆಗದ್ದೆ, ಹಿರಿಯ ಅರ್ಥಧಾರಿ ಎಂ.ಎನ್.ಹೆಗಡೆ ಹಳವಳ್ಳಿ, ಸಂಘಟಕರಾದ ಶಿವರಾಮ ಭಟ್ಟ, ಗಂಗಾ ಭಟ್ಟ, ಮಂಜುನಾಥ ಭಟ್ಟ, ಸುಮಂಗಲಾ ಭಟ್ಟ ಇತರರಿದ್ದರು. ಎಲ್.ಪಿ.ಭಟ್ಟ ಗುಂಡ್ಕಲ್ ಸನ್ಮಾನಪತ್ರ ವಾಚಿಸಿದರು. ಸುಬ್ರಾಯ ಭಟ್ಟ ಗಾಣಮನೆತಗ್ಗು ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top