Slide
Slide
Slide
previous arrow
next arrow

ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ವಿಶೇಷ ಪೂಜೆ

300x250 AD

ದಾಂಡೇಲಿ: ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಡಿ ಈ ವರ್ಷದ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯನ್ನು ಭಾನುವಾರ ಅಪಾರ ಜನಸಾಗರದ ನಡುವೆ ಶ್ರದ್ಧಾಭಕ್ತಿಯಿಂದ ಹಮ್ಮಿಕೊಳ್ಳಲಾಯಿತು.

ಗುರುಸ್ವಾಮಿ ಮೋಹನ ಸನದಿಯವರ ಮತ್ತು ಅರ್ಚಕ ವೃಂದದವರ ನೇತೃತ್ವದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜಾರಾಧನೆಗಳು ಜರುಗಿತು. ಮಧ್ಯಾಹ್ನ ಮಹಾ ಪೂಜೆಯಾದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಯಿತು. 12 ಸಾವಿರಕ್ಕೂ ಅಧಿಕ ಭಕ್ತರು ಈ ಪೂಜಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ್ದರು.

300x250 AD

ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಟಿ.ಆರ್. ಚಂದ್ರಶೇಖರ್, ಉಪಾಧ್ಯಕ್ಷ ಕೃಷ್ಣ ಪೂಜಾರಿ ಮತ್ತು ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ ಸೋಮಕುಮಾರ್ ಎಸ್, ಸಹ ಕಾರ್ಯದರ್ಶಿ ಅನಿಲ್ ದಂಡಗಲ್, ಖಜಾಂಚಿ ವಿಶ್ವನಾಥ್ ಶೆಟ್ಟಿ, ಗುರುಸ್ವಾಮಿ ಮೋಹನ್ ಸನದಿ, ಸಮಿತಿಯ ಸದಸ್ಯರುಗಳಾದ ಸುರೇಶ್ ನಾಯರ್, ರಾಜಶೇಖರ್ ಪಾಟೀಲ್, ಅನಿಲ್ ನಾಯ್ಕರ್, ಗೌರೀಶ್ ಸೊಲ್ಲದ್, ಮಹೇಶ್ ನಾಗಪ್ಪ, ಶಿವಾನಂದ ರಾಥೋಡ್ ಮೊದಲಾದವರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top