Slide
Slide
Slide
previous arrow
next arrow

ಆಶ್ರಯ ಯೋಜನೆ ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಕಾರ್ಯಾದೇಶ ಪತ್ರ ವಿತರಣೆ

300x250 AD

ಕುಮಟಾ: ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ದೀವಗಿ ಗ್ರಾಮಪಂಚಾಯತ್ ಕಾರ್ಯಾಲಯದ ಎದುರು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಇದೇ ವೇಳೆ ದೀವಗಿ ಗ್ರಾಮಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರವನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಕುಮಟಾ ಮಂಡಲ ಬಿಜೆಪಿ ಅಧ್ಯಕ್ಷ ಹೇಮಂತಕುಮಾರ ಗಾಂವಕರ್, ದೀವಗಿ ಗ್ರಾಮಪಂಚಾಯತ್ ಅಧ್ಯಕ್ಷ ಜಗದೀಶ ಭಟ್, ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಜಿಲ್ಲಾ ಸಂಚಾಲಕ ರಾಜೇಂದ್ರ ನಾಯ್ಕ್, ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಭಾರಿ ಎಂ. ಜಿ. ಭಟ್, ಜಿಲ್ಲಾ ಮುಖಂಡ ಡಾ. ಜಿ. ಜಿ. ಹೆಗಡೆ, ದೀವಗಿ ವ್ಯ.ಸೇ. ಸಹಕಾರಿ ಸಂಘದ ಅಧ್ಯಕ್ಷ ಉತ್ತಮ ಭಂಡಾರಿ, ಕೆನರಾ ಬ್ಯಾಂಕ್ ಮ್ಯಾನೇಜರ್ ಪುನೀತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗುರುರಾಜ್, ಎಫ್.ಎಲ್.ಸಿ. ದೀಪಕ್, ಗ್ರಾ.ಪಂ. ಸದಸ್ಯರುಗಳಾದ ರಾಮಚಂದ್ರ ದೇಸಾಯಿ, ಎಸ್.ಟಿ. ಗೌಡ, ನಾಗವೇಣ ಅಂಬಿಗ, ಮಾಲತಿ ಭಟ್, ಬ್ಯಾಂಕ್ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.

300x250 AD
Share This
300x250 AD
300x250 AD
300x250 AD
Back to top