Slide
Slide
Slide
previous arrow
next arrow

‘ಅತ್ಯುತ್ತಮ ದಂತವೈದ್ಯ ಸೆಕ್ರೆಟರಿ ಪ್ರಶಸ್ತಿ’ಗೆ ಡಾ.ಕೃಷ್ಣಪ್ರಭು ಆಯ್ಕೆ

300x250 AD

ಅಂಕೋಲಾ: ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ದಂತವೈದ್ಯರ ಸಮಾವೇಶದಲ್ಲಿ ಅಂಕೋಲೆಯ ಖ್ಯಾತ ದಂತವೈದ್ಯ ಡಾ. ಕೃಷ್ಣಪ್ರಭು ಅವರಿಗೆ ಅತ್ಯುತ್ತಮ ದಂತವೈದ್ಯ ಸೆಕ್ರೆಟರಿ ಪ್ರಶಸ್ತಿ ಭಾಜನವಾಗಿದೆ.

ಡಾ.ಕೃಷ್ಣಾ ಪ್ರಭು ತಮ್ಮ ಕರ್ತವ್ಯದಲ್ಲಿ ಶ್ರೇಷ್ಠತೆ ಮೆರೆದವರು. ಇವರ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಭಾರತೀಯ ದಂತ ವೈದ್ಯಕೀಯ ಸಂಸ್ಥೆ ಕೊಡಮಾಡುವ ‘ಅತ್ಯುತ್ತಮ ದಂತವೈದ್ಯ ಸೆಕ್ರೆಟರಿ ಪ್ರಶಸ್ತಿ’ಯನ್ನು ಇವರಿಗೆ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಮತ್ತಿತರ ರಾಜ್ಯಗಳ 2,500 ಕ್ಕಿಂತಲೂ ಹೆಚ್ಚು ದಂತವೈದ್ಯರುಗಳು ಉಪಸ್ಥಿತರಿದ್ದರು.

300x250 AD

ಕೃಷ್ಣಾ ಪ್ರಭು ವೈದ್ಯಕೀಯ ವೃತ್ತಿಯ ಜೊತೆಯಲ್ಲಿ ವಿಧಾಯಕ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಈ ಸಮಾಜಕ್ಕೆ ಸಹಕರಿಸುತ್ತಿದ್ದಾರೆ. ಈ ಗೌರವ ಅವರ ನಿಷ್ಕಾಮ ಸೇವೆಗೆ ಸಂದ ಗೌರವವಾಗಿದೆ. ಇನ್ನು ಹೆಚ್ಚಿನ ಪ್ರಶಸ್ತಿಗಳು ಅವರಿಗೆ ಅರಸಿ ಬರುವಂತಗಲಿ ಎಂದು ಹಿತೈಷಿಗಳು ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top