ಅಂಕೋಲಾ: ಪಟ್ಟಣದ ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಪಾಲಕರು ತಮ್ಮ ಮಕ್ಕಳಿಗೆ ವಿವಿಧ ರೀತಿಯ ವೇಷಭೂಷಣ ತೊಡಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಹಕರಿಸಿದರು. ಪುಟಾಣಿಗಳು ಅದ್ಭುತವಾದ ವೇಷಭೂಷಣದ ಜೊತೆಗೆ ತಮ್ಮ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ಶಾಂತಿನಿಕೇತನ ಟ್ರಸ್ಟ್ ನ ಕಾರ್ಯದರ್ಶಿ ಶಾಂತಿ ಬಿ.ನಾಯಕ, ನಿವೃತ್ತ ಎ.ಎಸ್.ಐ ಸುರೇಶ್ ನಾಯ್ಕ, ಕಲಾಕಾರರಾದ ವಿನಾಯಕ ಗುಡಿಗಾರ, ಯಕ್ಷಗಾನ ಕಲಾವಿದ ಪುನೀತ್ ನಾಯ್ಕ ಅತಿಥಿಗಳಾಗಿ ಆಗಮಿಸಿ ಸ್ಪರ್ಧೆಗೆ ತೀರ್ಪು ನೀಡಿದರು.
ವಿಜೇತರಾದ ವಿದ್ಯಾರ್ಥಿಗಳಿಗೆ ವಿಶೇಷವಾದ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಲಾಯಿತು. ಶಿಕ್ಷಕಿಯರಾದ ಶ್ರದ್ಧಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಶೀತಲ್ ನಾಯ್ಕ ಸ್ವಾಗತಿಸಿದರು. ಮಮತಾ ನಾಯ್ಕ ವಂದಿಸಿದರು. ಸಂಜೀವಿನಿ ಗಾಂವ್ಕರ್, ಲಕ್ಷ್ಮೀ ನಾಯ್ಕ, ಶ್ರೀನಂದಾ ಭಟ್ ಹಾಗೂ ಸಹ ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿ, ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು.