ಅಂಕೋಲಾ: ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ 2023-24 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರವನ್ನು 50 ಪ್ರತಿಶತ ಸಹಾಯಧನದೊಂದಿಗೆ ವಿತರಿಸಲು ಅರ್ಜಿ ಆಹ್ವಾನಿಸಲಾಗಿದ್ದು ರೂ. 33,600 ಮುಖ ಬೆಲೆಯ ಯಂತ್ರವನ್ನು ಫಲಾನುಭವಿಗಳಿಗೆ ರೂ.16,800 ವಂತಿಗೆ ಪಡೆದು ವಿತರಿಸಲಾಗುತ್ತದೆ.
ಫಲಾನುಭವಿಗಳು ಡಿಸೆಂಬರ್ 31 ರ ವರೆಗೆ ಆಧಾರ ಕಾರ್ಡ್ ಪ್ರತಿ, ಪ್ರೂಟ್ ಐಡಿ ಮತ್ತು 20 ರೂಪಾಯಿ ಬಾಂಡ್ ಪೇಪರ್ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವಂತೆ ತಾಲೂಕು ಪಶು ವೈದ್ಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.