Slide
Slide
Slide
previous arrow
next arrow

ಭಗವದ್ಗೀತೆ ರಚಿತವಾಗಿದ್ದು ವೇದ-ಧರ್ಮವನ್ನು ಸರಳವಾಗಿ ಅರ್ಥೈಸಿಕೊಳ್ಳಲು: ವಿ.ನಾಗರಾಜ ಭಟ್

300x250 AD

ಯಲ್ಲಾಪುರ: ವೇದ ಧರ್ಮವನ್ನು ಸರಳವಾಗಿ ಎಲ್ಲರೂ ಅರ್ಥೈಸಿಕೊಳ್ಳುವುದಕ್ಕಾಗಿ ಭಗವದ್ಗೀತೆ ರಚಿತವಾಗಿದೆ. ಅರ್ಜುನನನ್ನು ನಿಮಿತ್ತವಾಗಿಸಿಕೊಂಡು ಶ್ರೀಕೃಷ್ಣ ಗೀತೆಯ ಮೂಲಕ ಲೋಕಕ್ಕೆ ಧರ್ಮದ ಸಂದೇಶ ನೀಡಿದ್ದಾನೆ ಎಂದು ಸ್ವರ್ಣವಲ್ಲೀ ಶ್ರೀ ರಾಜರಾಜೇಶ್ವರಿ ಪಾಠಶಾಲೆಯ ಅಧ್ಯಾಪಕ ವಿ.ನಾಗರಾಜ ಭಟ್ಟ ಕೋಣೆಮನೆ ಹೇಳಿದರು.

ಅವರು ತಾಲೂಕಿನ ಬೆಳಖಂಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಭಗವದ್ಗೀತಾ ಅಭಿಯಾನದಲ್ಲಿ ಗೀತೆಯ ಮಹತ್ವದ ಕುರಿತು ಮಾತನಾಡಿದರು. ಗೀತೆಯಲ್ಲಿ ಧರ್ಮ, ಅಧರ್ಮಗಳ ಕುರಿತು ವಿವರವಾಗಿ ಹೇಳಲಾಗಿದೆ. ಜಾತಿ, ಮತ ಬೇಧವಿಲ್ಲದೇ ಪ್ರತೊಯೊಬ್ಬರೂ ಅದನ್ನು ಓದಿ, ಅರ್ಥೈಸಿಕೊಳ್ಳುವ ಜತೆಗೆ ಧರ್ಮವನ್ನು ಆಚರಿಸಲು, ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು.
‌‌

300x250 AD

ಸ್ವರ್ಣವಲ್ಲೀ ಶ್ರೀಗಳು ಕಳೆದ 16 ವರ್ಷಗಳಿಂದ ಗೀತಾ ಅಭಿಯಾನದ ಮೂಲಕ ರಾಜ್ಯಾದ್ಯಂತ ಗೀತೆಯ ಮಹತ್ವ ಸಾರುವ ಮಹತ್ವಕಾರ್ಯದಲ್ಲಿ ತೊಡಗಿದ್ದಾರೆ ಎಂದ ಅವರು, ಭಗವದ್ಗೀತೆಯ ಪಠಣವನ್ನು ಅಭಿಯಾನದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಪ್ರತಿ ನಿತ್ಯ ಮನೆಯಲ್ಲಿ ಗೀತೆಯ ಪಠಣ ನಡೆದಾಗ ಮಾತ್ರ ಅಭಿಯಾನ ಸಾರ್ಥಕವಾಗುತ್ತದೆ ಎಂದರು.
ಕಾವೇರಿ ಭಾಗ್ವತ ಹಾಗೂ ಕೇಂದ್ರ ಮಾತೃ ಮಂಡಳಿ ಸಂಚಾಲಕಿ ನಾಗರತ್ನಾ ಭಟ್ಟ ಅವರ ಮಾರ್ಗದರ್ಶನದಲ್ಲಿ ಗೀತೆಯ 10 ನೇ ಅಧ್ಯಾಯ ಪಠಿಸಲಾಯಿತು.
ವೆಂಕಟ್ರಮಣ ಭಟ್ಟ ಕಬ್ಬಿನಕುಂಬ್ರಿ, ಸುಬ್ರಾಯ ಕೋಣೆಮನೆ, ನಾರಾಯಣ ಭಟ್ಟ ಬೆಳಖಂಡ, ನಾರಾಯಣ ಭಟ್ಟ ಮರಿಯನಪಾಲ, ತಿಮ್ಮಣ್ಣ ಭಟ್ಟ ಮೊಟ್ಟೆಪಾಲ, ಭಾಗೀರಥಿ ಭಟ್ಟ, ಗೀತಾ ಭಟ್ಟ, ಭಾಗೀರಥಿ ಭಟ್ಟ ಹೆಗಡೆಮನೆ, ಅನ್ನಪೂರ್ಣ ಹೆಗಡೆ, ಲಕ್ಷ್ಮಿ ಭಟ್ಟ ಕುಂಟೆಮನೆ, ಸರಸ್ವತಿ ಹೆಗಡೆ, ಮಹಾದೇವಿ ಭಟ್ಟ, ಸುಬ್ಬಿ ಭಟ್ಟ, ಪಾರ್ವತಿ ಕೋಣೆಮನೆ ಇತರರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top