Slide
Slide
Slide
previous arrow
next arrow

ಬಂಗಾರಮಕ್ಕಿಯ ಮಹಾದೀಪೋತ್ಸವ ಸಂಪನ್ನ

300x250 AD

ಹೊನ್ನಾವರ : ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಸನ್ನಿಧಿಯಲ್ಲಿ ಮಂಗಳವಾರ ಮಹಾದೀಪೋತ್ಸವ ಅತ್ಯಂತ ವೈಭವಯುತವಾಗಿ ನೆರವೇರಿತು.

ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಸನ್ನಿಧಿಯಲ್ಲಿ ಕಾರ್ತಿಕ ಶುದ್ಧ ಪಾಡ್ಯ ನ.14 ಮಂಗಳವಾರದಿಂದ ಶ್ರೀ ದೇವರಿಗೆ ಭಕ್ತಾದಿಗಳಿಂದ ದೀಪೋತ್ಸವ ಸೇವೆಗಳು ಸಮರ್ಪಣೆಯಾಗಿ ಕಾರ್ತಿಕ ಬಹುಳ ಅಮವಾಸ್ಯೆ ಡಿ.12 ಮಂಗಳವಾರದಂದು ಮಹಾದೀಪೋತ್ಸವದೊಂದಿಗೆ ಸಂಪನ್ನಗೊಂಡಿತು.

300x250 AD

ಕಾರ್ತಿಕ ಬಹುಳ ಅಮವಾಸ್ಯೆ ಡಿ.12 ಮಂಗಳವಾರ ಮಹಾದೀಪೋತ್ಸವದಂದು ಭಜನೆ, ಪಲ್ಲಕ್ಕಿ ಉತ್ಸವ, ತೊಟ್ಟಿಲೋತ್ಸವ ಹಾಗೂ ಮಹಾಪೂಜೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೇರವೇರಿದವು. ದೀಪೋತ್ಸವದ ಹಣತೆಯ ದೀಪಗಳ ಕಾಂತಿ ದೇವಸ್ಥಾನದ ಸೋಬಗನ್ನು ಇಮ್ಮಡಿಗೊಳಿಸಿತ್ತು. ಭಕ್ತಾದಿಗಳು ದೀಪೋತ್ಸವ ಸೇವೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.

Share This
300x250 AD
300x250 AD
300x250 AD
Back to top