Slide
Slide
Slide
previous arrow
next arrow

ಜಾನ್ಮನೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಯಶಸ್ವಿ

300x250 AD

ಶಿರಸಿ: ತಾಲೂಕಿನ ಜಾನ್ಮನೆ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಯಶಸ್ವಿಯಾಗಿ ನಡೆಯಿತು. ನೂರಾರು ಜನರು ಯಾತ್ರೆಯ ಉದ್ದೇಶ, ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಹಲವು ಫಲಾನುಭವಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ಪಂಚಾಯಿತಿ ಹಾಗೂ ಲೀಡ್ ಬ್ಯಾಂಕ್ ಸಹಯೋಗದಲ್ಲಿ ಉತ್ತಮ ಭಾರತ ನಿರ್ಮಾಣಕ್ಕೆ ಕೈ ಜೋಡಿಸುವುದಾಗಿ ಪ್ರತಿಜ್ಞೆ ಮಾಡಲಾಯಿತು.

ಈ ವೇಳೆ ಫಲಾನುಭವಿ ಗಣಪತಿ ಹೆಗಡೆ ಮಾತನಾಡಿ, ನಮ್ಮದು ಚಿಕ್ಕ ಹಿಡುವಳಿಯಾದರೂ ಬೆಳೆವಿಮೆ 24 ಸಾವಿರಕ್ಕೂ ಅಧಿಕ ಬಂದಿದ್ದು, ಇದರಿಂದ ಹೆಚ್ಚಿನ ಬೆಳೆ ತೆಗೆಯಲು ಅನೂಕಲವಾಗಿದೆ. ಹೀಗೆಯೇ ಬೆಳೆ ವಿಮೆ ಇರಬೇಕು ಎನ್ನುವುದು ನಮ್ಮಂಥ ರೈತರ ಆಶಯ ಎಂದರು.

ಇನ್ನೋರ್ವ ಫಲಾನುಭವಿ ರವಿಂದ್ರ ಭಟ್ ಮಾತನಾಡಿ, ಉದ್ಯೋಗಖಾತ್ರಿ ಯೋಜನೆಯಲ್ಲಿ ಹೊಸ ತೋಟ ನಿರ್ಮಾಣ ಮಾಡಿದ್ದೇವೆ. ಬಸಿ ಕಾಲುವೆ ತೋಡಿಸಿದ್ದೇವೆ. ಎರಡೂವರೆ ಲಕ್ಷದಷ್ಟು ಹಣವನ್ನು ಈ ಯೋಜನೆಗೆ ಸರಕಾರ ನೀಡಿದೆ. ಬೆಳೆಸಾಲ ಸಿಕ್ಕಿದೆ, ಹೀಗೆ ಇದೆಲ್ಲವೂ ನಮಗೆ ಅನುಕೂಲ ಕಲ್ಪಿಸಿದ್ದು ಉತ್ತಮವಾಗಿದೆ ಎಂದರು.

300x250 AD

ಫಲಾನುಭವಿ ನರಸಿಂಹ ಬಟ್ ಮಾತನಾಡಿ, ಉಜ್ವಲ ಯೋಜನೆಯಲ್ಲಿ ಅನಿಲ ವಿತರಣೆಯನ್ನು ಮಾಡಿದ್ದು, ಕಟ್ಟಿಗೆ ಬಳಕೆ ಕಡಿಮೆಯಾಗಿದ್ದು, ಮನೆಯಲ್ಲಿ ಹೊಗೆ ಇಲ್ಲದೇ ಮಹಿಳೆಯರು ಉತ್ತಮವಾಗಿ ಅಡುಗೆ ಮಾಡಲು ಈ ಯೋಜನೆ ಬಹಳ ಅನುಕೂಲಕರವಾಗಿದೆ ಎಂದರು.

Share This
300x250 AD
300x250 AD
300x250 AD
Back to top