Slide
Slide
Slide
previous arrow
next arrow

ಡಾ.ಅಂಬೇಡ್ಕರ್ ಪರಿಶ್ರಮ ನಮ್ಮ ನೆಮ್ಮದಿಗೆ ಕಾರಣ; ವನಿತಾ ರಾಣೆ

300x250 AD

ಕಾರವಾರ: ಡಾ.ಬಿ.ಆರ್.ಅಂಬೇಡ್ಕರ್ ಅವರು ಪಟ್ಟ ಕಷ್ಟ ದೇಶಕ್ಕಾಗಿ ಮಾಡಿದ ಪರಿಶ್ರಮ ನಮ್ಮ ನೆಮ್ಮದಿಗೆ ಕಾರಣವಾಗಿದೆ. ಜೊತೆಗೆ ಕುಟುಂಬದ ಹಿತಾಸಕ್ತಿಗಳನ್ನು ಬದಿಗಿಟ್ಟು ಶೋಷಿತ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚನೆ ಮಾಡಿದ್ದರಿಂದ ನಾವೆಲ್ಲರೂ ಸಮಾನತೆಯ ಬದುಕನ್ನು ಕಾಣಲು ಸಾಧ್ಯವಾಗಿದೆ ಎಂದು ಸಿದ್ಧರ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷಿ ವನಿತಾ ಪ್ರಭಾಕರ ರಾಣೆ ಅಭಿಪ್ರಾಯಪಟ್ಟರು.

ಅವರು ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಿದ್ಧರದ ಮಲ್ಲಿಕಾರ್ಜುನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಜನತೆ ಅಂಬೇಡ್ಕರ್ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು, ಅಗಾಧವಾದ ಜ್ಞಾನವನ್ನು ಪಡೆಯಲು ಹೆಚ್ಚಿನ ಓದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಎಮ್ ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರವರು ಜಗತ್ತಿನ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಬ್ಬರು, ಸಂವಿಧಾನದ ಪೀಠಿಕೆಯಲ್ಲಿಯೇ ಇಡಿ ಸಂವಿಧಾನದ ಆಶಯವನ್ನು ಸ್ಪಷ್ಟಪಡಿಸಿದ್ದಾರೆ ಎಂದರು.
ನ್ಯೂ ಹೈಸ್ಕೂಲ್ ಕಿನ್ನರ ಶಿಕ್ಷಕ ಹನುಮಂತಪ್ಪ ಎಸ್. ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರವರು ಅನುಭವಿಸಿದ ನೋವುಗಳನ್ನು ವಿಸ್ತೃತಪಡಿಸಿ ದಮನಕ್ಕೊಳಗಾದ ಜನಾಂಗದ ಜಾಗೃತಿಗೆ ಆರಂಭಿಸಿದ ಮೂಕನಾಯಕ, ಬಹಿಷ್ಕೃತ ಭಾರತ ಪತ್ರಿಕೆಯ ಮಹತ್ವವನ್ನು ತಿಳಿಸುತ್ತಾ ಬ್ರಿಟಿಷ ಸರ್ಕಾರ ಅಂಬೇಡ್ಕರ್ ವರಿಗೆ ಸಲ್ಲಿಸಿದ ಗೌರವವನ್ನು ತಿಳಿಸಿದರು.

300x250 AD

ಪ್ರಾಚಾರ್ಯ ಜಿ ಡಿ ಮನೋಜ ಅಧ್ಯಕ್ಷತೆ ವಹಿಸಿ ಮಾತನಾಡಿ ಹನ್ನೊಂದು ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಅರವತ್ನಾಲ್ಕು ಪಿ.ಎಚ್.ಡಿ ಪಡೆದ ವಿಶ್ವಜ್ಞಾನಿ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಅವರ ಮಹಾ ಪರಿನಿರ್ವಾಣ ದಿನದಂದು ಏರ್ಪಡಿಸಿದ್ದಕ್ಕೆ ಕೃತಜ್ಞತೆಯನ್ನು ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸ್ನೇಹಾ ಗೌಡಾ ಕೃಷ್ಣಾ ಕುಣಬಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ಅಶೋಕ ಹರಳಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂಜುನಾಥ ಮಡಿವಾಳ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥಿಸಿದರು, ಪ್ರಶಾಂತ ರಾಣೆ ಸ್ವಾಗತಿಸಿದರು, ಕೃಷ್ಣಾ ಕುಣಬಿ ನಿರೂಪಿಸಿದರು ವಿದ್ಯಾರ್ಥಿನಿ ಸ್ನೇಹಾ ಗೌಡಾ ವಂದಿಸಿದರು.

Share This
300x250 AD
300x250 AD
300x250 AD
Back to top