Slide
Slide
Slide
previous arrow
next arrow

ಆರನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

300x250 AD

ಕಾರವಾರ: ಪ್ರಸಕ್ತ ಸಾಲಿನ ಅಂಕೋಲಾ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಆಂಗ್ಲ ಮಾಧ್ಯಮ ಶಾಲೆಗೆ ಆರನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅನುಮೋದಿಸಲ್ಪಟ್ಟ ಶಾಲೆಯಲ್ಲಿ 5ನೇ ತರವತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಡಿ. 7 ರ ಬೆಳಗ್ಗೆ 11 ರಿಂದ ಡಿ.31 ರಾತ್ರಿ 11:59 ರವರೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಪ್ರವೇಶ ಪರೀಕ್ಷೆಯು 2024ರ ಫೆಬ್ರವರಿ 18 ರಂದು ನಿಗದಿಪಡಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಆನ್ಲೈನ್ಲ್ಲಿ ಅರ್ಜಿಯನ್ನು ಭರ್ತಿ ಮಾಡಲು ಕಿತ್ತುರು ರಾಣಿ ಚನ್ನಮ್ಮ ವಸತಿ ವೆಬ್ಸೈಟ್ http://kea.kar.nic.in ನಲ್ಲಿ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ವೆಬ್ಸೈಟ್ http://kreis.kar.nic.in ನಲ್ಲಿ ಪ್ರಚುರ ಪಡಿಸಲಾಗಿದೆ. ಪರೀಕ್ಷೆಗೆ ಪ್ರವೇಶ ಪತ್ರಗಳನ್ನು 2024 ರ ಫೆ.1 ರಿಂದ ವಸತಿ ಶಾಲೆಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ವಿದ್ಯಾರ್ಥಿಯ ಎಸ್.ಎ.ಟಿ.ಎಸ್ ನಂ, ವಿದ್ಯಾರ್ಥಿಯ ಇತ್ತೀಚಿನ 2 ಭಾವಚಿತ್ರ, ಮೀಸಲಾತಿ ಪ್ರಯೋಜನಗಳನ್ನು ಕೋರಿರುವ ಪಕ್ಷದಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ., ಸ್ಥಳೀಯ ಅಭ್ಯರ್ಥಿ ಎಂದು ರುಜುವಾತು ಪಡಿಸಲು ಅಗತ್ಯವಾದ ಆಧಾರ್ ಕಾರ್ಡ್ / ರೇಷನ್ ಕಾರ್ಡ್ /ಸ್ಥಳೀಯ ಪ್ರಮಾಣ ಪತ್ರ, ವಿಶೇಷ ವರ್ಗಗಳಿಗೆ ಸಂಬ೦ಧಿಸಿದ ಪ್ರಮಾಣ ಪತ್ರ.

300x250 AD

ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬೆಳಸೆ, ಅಂಕೋಲಾ ಇವರಿಗೆ ದೂರವಾಣಿ ಸಂಖ್ಯೆ TEL:+919480022044ಗೆ ಸಂಪರ್ಕಿಸಬಹುದು ಎಂದು ಅಂಕೋಲಾದ ಬೆಳಸೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top