Slide
Slide
Slide
previous arrow
next arrow

ಹುತಾತ್ಮ ಕ್ಯಾ.ಪ್ರಾಂಜಲ್‌ಗೆ ಶೃದ್ಧಾಂಜಲಿ

300x250 AD

ಶಿರಸಿ: ಇತ್ತೀಚೆಗೆ ಜಮ್ಮುಕಾಶ್ಮೀರದ ರಾಜೌರಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಧೀರ ಸೇನಾನಿ ಕ್ಯಾಪ್ಟನ್ ಪ್ರಾಂಜಲ್ ಹಾಗೂ ಸಂಗಡಿಗರಿಗೆ ನಗರದ ಶ್ರೀ ಅನ್ನಪೂರ್ಣೆಶ್ವರಿ ಸೇವಾ ಟ್ರಸ್ಟ್ ನಿಂದ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ವಿಶಾಲನಗರದ ಅಮರ್ ಜವಾನ್ ಉದ್ಯಾನವನದ ಸ್ಮಾರಕದಲ್ಲಿ ಟ್ರಸ್ಟ್ ಪದಾಧಿಕಾರಿಗಳು, ಗಣ್ಯರು ಹಾಗೂ ಮಾಜಿ ಸೈನಿಕರ ಸಂಘದವರು ಸೇರಿ ಹುತಾತ್ಮ ಸೈನಿಕರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಯುಸೇನೆಯ ನಿವೃತ್ತ ಯೋಧ ಕ್ಯಾಪ್ಟನ್ ರವಿ ಕಾನೆಟ್ಕರ್, ವೈರಿಗಳೊಂದಿಗೆ ಯುದ್ಧ ಮಾಡುವ ಸಂದರ್ಭದಲ್ಲಿ ಯೋಧರಿಗೆ ಮನೆ, ಕುಟುಂಬ ಹೀಗೆ ಯಾವುದರ ಅರಿವು ಇರುವುದಿಲ್ಲ. ದೇಶ ಮೊದಲು ಎಂಬ ಕೆಚ್ಚೆದೆಯಲ್ಲಿ ಹೋರಾಡುತ್ತಾರೆ. ಅಲ್ಲಿರುವುದು ದೇಶಾಭಿಮಾನ ಮಾತ್ರ ಎಂದರು.
ಶಿಸ್ತು, ಸಂಯಮ, ಸಮಯಪ್ರಜ್ಞೆ, ದೇಶಾಭಿಮಾನ ಸೈನ್ಯದಿಂದ ನಾವು ಕಲಿಯಬಹುದು. ಇಂದಿನ ಮಕ್ಕಳಿಗೂ ಸಹ ದೇಶಾಭಿಮಾನ ಮೂಡಿಸುವ ಕೆಲಸ ಪಾಲಕರಿಂದಲೂ ಆಗಬೇಕು. ಮಕ್ಕಳಿಗೆ ಸಂಸ್ಕಾರ, ಗುರುಹಿರಿಯರಿಗೆ ಗೌರವ ನೀಡುವ ರೀತಿಯಲ್ಲಿ ಬೆಳೆಸಬೇಕು ಎಂದರು.

ಶ್ರೀ ಅನ್ನಪೂರ್ಣೆಶ್ವರಿ ಸೇವಾ ಟ್ರಸ್ಟ್ ಸಂಚಾಲಕರಲ್ಲೊಬ್ಬರಾದ ಸತೀಶ ನಾಯ್ಕ ಮಧುರವಳ್ಳಿ ಮಾತನಾಡಿ, ಸಾಕಷ್ಟು ಯೋಧರು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಅಂಥವರ ತ್ಯಾಗವನ್ನು ಸ್ಮರಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದ ಅವರು, ಶಿರಸಿಯಲ್ಲಿ ನಗರಸಭೆ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾದ ಅಮರ್ ಜವಾನ್ ಉದ್ಯಾನವನ ಇದೊಂದು ಶಿರಸಿ ನಗರಕ್ಕೆ ಕಳಶಪ್ರಾಯವಾದದ್ದು. ಅ‌ಮರರಾಗಿರುವ ವೀರ ಯೋಧರ ಸ್ಮಾರಕ ನಿರ್ಮಾಣವನ್ನು ಇಲ್ಲಿ ಮಾಡಿರುವುದರಿಂದ ದೇಶಕ್ಕೆ ಬಲಿದಾನ ಮಾಡಿದ ಯೋಧರನ್ನು ನೆನಪಿಸಿ, ಗೌರವಿಸುವುದಕ್ಕೆ ಸೂಕ್ತ ಸ್ಥಳವಾಗಿದೆ ಎಂದರು.

300x250 AD

ಟ್ರಸ್ಟ್ ಅಧ್ಯಕ್ಷ ಸಚಿನ್ ಕೊಡ್ಕಣಿ, ಸಂಚಾಲಕರಾದ ಶ್ರೀಪತಿ ನಾಯ್ಕ, ಕೇಶವ ಪಾಲೇಕರ್, ಕಿರಣ ಮಡಿವಾಳ, ರಾಜೇಶ ಮೈದುರಗಿಮಠ, ದಿನೇಶ ನಾಯ್ಕ,ಚಿಂತಕರಾದ ಡಾ.ರವಿಕಿರಣ ಪಟವರ್ಧನ, ನಿವೃತ್ತ ಶಿಕ್ಷಕ ಎನ್. ಎಚ್.ನಾಯ್ಕ್ ಕಲಕರಡಿ, ಸಾಹಿತ್ಯ ಸಂಚಲನದ ಶ್ರೀಕೃಷ್ಣ ಪದಕಿ, ದಾಕ್ಷಾಯಿಣಿ ಪಿ ಸಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಪಾದ ಭಟ್ಟ, ಆರ್.ಜಿ.ನಾಯ್ಕ ಮತ್ತಿತರರು ಪಾಲ್ಗೊಂಡರು.
ಇದೇ ವೇಳೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ೬೭ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಅವರ ಕೊಡುಗೆಯನ್ನು ಸ್ಮರಿಸಲಾಯಿತು. ಒಂಟಿ ಸಲಗದೊಂದಿಗೆ ಸೆಣಸಿ ಹುತಾತ್ಮವಾದ ದಸರಾ ಅಂಬಾರಿ ಹೊತ್ತ ಆನೆ ಅರ್ಜುನನಿಗೂ ಟ್ರಸ್ಟ್ ಪದಾಧಿಕಾರಿಗಳು ಕಂಬನಿ ಮಿಡಿದರು.

Share This
300x250 AD
300x250 AD
300x250 AD
Back to top