Slide
Slide
Slide
previous arrow
next arrow

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಧರಣಿ ಸತ್ಯಾಗ್ರಹ

300x250 AD

ಶಿರಸಿ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಇಂದು ಬೆಳಗಾವಿಯ ಸುವರ್ಣಸೌಧದ ಎದುರು ಶಿರಸಿಯ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಮಾಡಿ, ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಜಿಲ್ಲೆಯ ಸುಮಾರು 50 ಕ್ಕೂ ಹೆಚ್ಚಿನ ಸಂಘಟನೆಗಳ, ಜಿಲ್ಲೆಯ ನೂರಾರು ಪ್ರಮುಖ ಗಣ್ಯರ ಹಾಗೂ ಉತ್ತರಕನ್ನಡ ಜಿಲ್ಲೆಯ ಸಮಸ್ತ ನಾಗರೀಕರ ಬೆಂಬಲದೊಂದಿಗೆ ಆಸ್ಪತ್ರೆ ನೀಡಿ ಜೀವ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ನವೆಂಬರ್ 2 ರಿಂದ ನವೆಂಬರ್ 9 ರವರೆಗೆ ಶಿರಸಿಯಿಂದ ಕಾರವಾರದವರೆಗೆ ಸ್ವಾಭಿಮಾನ ಪಾದಯಾತ್ರೆ ಹೊರಟು, ಮಾರ್ಗ ಮಧ್ಯ ಅಲ್ಲಲ್ಲಿ ಸಭೆಗಳನ್ನು ನಡೆಸಿ, ಅಪಾರ ಜನ ಬೆಂಬಲದೊಂದಿಗೆ 140 ಕಿ.ಮೀಟರ್ ಪಾದಯಾತ್ರೆ ಮಾಡಿ, ಕಾರವಾರದಲ್ಲಿ ಬೃಹತ್ ಜಾಥಾ ಹಾಗೂ ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ನಂತರ ನನ್ನ ಹೋರಾಟ ಆಸ್ಪತ್ರೆ ಆಗುವವರೆಗೂ ನಿರಂತರವಾಗಿರುತ್ತದೆ ಎಂದು ನವೆಂಬರ್ 27 ರಿಂದ ಡಿಸೆಂಬರ್ 3 ರವರೆಗೆ ಶಿರಸಿಯ ತಹಶೀಲ್ದಾರ್ ಕಚೇರಿ ಎದರು 8 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದ್ದರು.

ಇಂದು ಬೆಳಗಾವಿಯ ಸುವರ್ಣಸೌಧದ ಮುಂಭಾಗ ಜಿಲ್ಲೆಯ ಅಪಾರ ಜನರೊಂದಿಗೆ ಒಂದು ದಿನದ ಧರಣಿ ಸತ್ಯಾಗ್ರಹ ಮಾಡಿ ಉತ್ತರಕನ್ನಡ ಜಿಲ್ಲೆಗೆ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕಾದ ಅಗತ್ಯಕ್ರಮಗಳನ್ನು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

300x250 AD

ಈ ಧರಣಿ‌ ಸತ್ಯಾಗ್ರಹಕ್ಕೆ ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದು, ಜಿಲ್ಲೆಯಾದ್ಯಂತ ಸಾವಿರಕ್ಕೂ ಹೆಚ್ಚು ಜನರು‌ ಧರಣಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈಗಾಗಲೇ ನಮ್ಮ ಜಿಲ್ಲೆಯ ಶಾಸಕರುಗಳಿಗೆ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ವಿಧಾನಸಭೆ ಚಳಿಗಾಲದ ಅಧೀವೇಶನದಲ್ಲಿ‌ ವಿಷಯ ಪ್ರಸ್ತಾಪಿಸುವಂತೆ ಮನವಿ ಮಾಡಿದ್ದು, ಜಿಲ್ಲೆಯ ಅನೇಕ ಗಣ್ಯರ ಬೆಂಬಲವನ್ನು ಕೋರಲಾಗಿದೆ.

Share This
300x250 AD
300x250 AD
300x250 AD
Back to top