ಯಲ್ಲಾಪುರ: COTPA-2003 ಕಾಯಿದೆ ಉಲ್ಲ೦ಘಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅoಗಡಿಗಳ ಮೇಲೆ ತಾಲೂಕು ತಂಬಾಕು ತನಿಖಾದಳದ ಸದಸ್ಯರು ದಾಳಿ ನಡೆಸಿ ರೂ 2200 ದಂಡ ವಿಧಿಸಿದ್ದಾರೆ. ತಾಲೂಕು ತಂಬಾಕು ತನಿಖಾ ದಳದ ಅಧ್ಯಕ್ಷರಾದ ತಹಶೀಲ್ದಾರ ಎಂ. ಗುರುರಾಜ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸುಮಾರು 20 ಕ್ಕೂ ಹೆಚ್ಚು ಅಂಗಡಿ ಪರಿಶೀಲಿಸಿ COTPA ಉಲ್ಲ೦ಘಿಸಿದ 9 ಅಂಗಡಿಗಳಿಗೆ ದಂಡ ವಿಧಿಸಲಾಗಿದೆ.
ಈ ಸಂದರ್ಭದಲ್ಲಿ ಅಂಗಡಿಕಾರರಿಗೆ CoTPA- 2003 ಕಾಯಿದೆ ಕುರಿತು ಅರಿವು ಮೂಡಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ, ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಟಿ ಭಟ್ಟ, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ, ಬಿಪಿಎಂ ಎಸ್.ಎಸ್.ಪಾಟೀಲ, ತಾಪಂ ಸಹಾಯಕ ನಿರ್ದೇಶಕ ಮಂಜುನಾಥ ಅಗೇರ, ಸಿಆರ್ ಪಿ. ಎಸ್. ಬಿ. ವೆರ್ಣೆಕರ. ಐಸಿಡಿಎಸ್ ಮೇಲ್ವಿಚಾರಕಿ ಪ್ರಮೋದಾ ಚಂದ್ರಶೇಖರ, ಪಪಂ ಆರೋಗ್ಯ ನಿರೀಕ್ಷಕ ಗುರುನಾಥ ಗಡಗಿ, ಪೋಲಿಸ್ ಇಲಾಖೆಯ ರಾಘವೇಂದ್ರ ನಾಯಕ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಮಾನ್ಯ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕಾ ತಂಬಾಕು ತನಿಖಾ ದಳದ ಸದಸ್ಯರ ಸಭೆ ನಡೆಯಿತು. CoTPA-20 2003 ರ ಪರಿಣಾಮಕಾರಿ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಶಾಲೆ, ಕಾಲೇಜುಗಳಲ್ಲಿ ತಂಬಾಕಿನ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.