Slide
Slide
Slide
previous arrow
next arrow

ನಿವೃತ್ತ ಪ್ರಾಂಶುಪಾಲ ಎಚ್. ಎಲ್. ನಾಯಕ ವಿಧಿವಶ

300x250 AD

ಅಂಕೋಲಾ: ತಾಲೂಕಿನ ಕಣಗಿಲ ಮೂಲದ ಹಾಲಿ ವಂದಿಗೆಯ ನಿವಾಸಿ ನಿವ್ರತ್ತ ಪ್ರಾಂಶುಪಾಲ ಎಚ್ ಎಲ್ ನಾಯಕ(72) ನಿಧನರಾಗಿದ್ದಾರೆ

ಮೃತರು ತನ್ನ ಸೇವಾ ಅವಧಿಯಲ್ಲಿ ಅತ್ಯುತ್ತಮವಾದ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ನಿವೃತ್ತಿಯ ನಂತರವೂ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಉಡುಪಿ ಜಿಲ್ಲೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಕುಮಟಾದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಸಾಹಿತಿ ಹೊನ್ನಮ್ಮ ನಾಯಕರವರ ಪತಿಯಾಗಿದ್ದು, ಇವರು ಪತ್ನಿ, ಈರ್ವರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ತಾಲೂಕು ಹಾಗೂ ಜಿಲ್ಲೆಯ ಹಲವು ಗಣ್ಯರು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top