Slide
Slide
Slide
previous arrow
next arrow

ಡಿ.10ಕ್ಕೆ ‘ಶಕ್ತಿ ಸಂಚಯ’ ಜಾಗೃತ ಮಹಿಳೆಯರ ಸಮಾವೇಶ

300x250 AD

ಕುಮಟಾ: ಎಲ್ಲಾ ಸಂದರ್ಭಗಳಲ್ಲಿಯೂ ತಮ್ಮ ಕರ್ತವ್ಯ-ಆದರ್ಶ -ನೀತಿ, ನಿಯಮಗಳಿಂದ ಸಮಾಜಕ್ಕೆ ದಾರಿದೀಪವಾಗಿ ಬೆಳಗಿದ ಸ್ತ್ರೀ ಒಂದು ದೊಡ್ಡ ಶಕ್ತಿ ಮತ್ತು ಚೈತನ್ಯದ ಬುಗ್ಗೆ. ಆ ದೊಡ್ಡ ಶಕ್ತಿಯ ವಿರಾಟ ಪ್ರದರ್ಶನವೇ “ಶಕ್ತಿಸಂಚಯ”. ದೇಶದೆಲ್ಲೆಡೆ ಈ ರೀತಿಯ 400ಕ್ಕಿಂತಲೂ ಹೆಚ್ಚು ಸಮಾವೇಶಗಳು ಜರುಗಲಿದ್ದು, ಈಗಾಗಲೇ ದೇಶದಾದ್ಯಂತ ಅತ್ಯುತ್ಸಾಹದಿಂದ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಮಹಿಳೆಯರು ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ ಎಂದು ಕಾರವಾರ ಜಿಲ್ಲೆಯ ಜಾಗೃತ ಮಹಿಳೆಯರ ಸಮಾವೇಶದ ಜಿಲ್ಲಾ ಸಂಯೋಜಕಿ ಡಾ. ಶ್ರೀದೇವಿ ಸುರೇಶ ಹೇಳಿದರು.

ಅವರು ಶ್ರೀ ಕಲ್ಪತರು ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಕುಮಟಾದ ಗಿಬ್ ಹೈಸ್ಕೂಲ್ ಆವಾರದಲ್ಲಿ ಡಿ. 10 ರಂದು ರವಿವಾರ ನಡೆಯಲಿರುವ ‘ಶಕ್ತಿ ಸಂಚಯ’ ಜಾಗೃತ ಮಹಿಳೆಯರ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಪಟ್ಟಣದ ದೇವರಹಕ್ಕಲದ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಈ ಸಮಾವೇಶದಿಂದ ಮಹಿಳೆಯರು, ತಮ್ಮ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಪರಿಹಾರ ಮಾಡುವತ್ತ ಸಂಘಟಿತರಾಗಿ ಕಾರ್ಯಪ್ರವೃತ್ತರಾಗಲಿದ್ದಾರೆ. ಭವಿಷ್ಯದ ಭಾರತದ ವಿಕಾಸದಲ್ಲಿ ನಮ್ಮ ಪಾತ್ರ ಏನು ಎಂಬುದನ್ನು ಅರಿತು ಅದರತ್ತ ಗಮನ ಕೇಂದ್ರೀಕರಿಸಲಿದ್ದಾರೆ. ಸಮಾವೇಶದಲ್ಲಿ ಸಮಾಜದ ಬೇರೆ ಬೇರೆಯ 11 ಕ್ಷೇತ್ರದ ಮಹಿಳೆಯರು ಭಾಗವಹಿಸಲಿದ್ದಾರೆ. ಭಾರತೀಯ ನಾರಿಯರ “ಶಕ್ತಿಸಂಚಯ”ವಾದ ಈ ಸಮಾವೇಶ ಒಂದು ಐತಿಹಾಸಿಕ ಸಮಾವೇಶವಾಗಲು ತಾವೂ ಕೈಜೋಡಿಸಿ ಎಂದು ಅವರು ಮನವಿ ಮಾಡಿದರು.

300x250 AD

ಭಾರತೀಯ ಚಿಂತನೆಯಲ್ಲಿ ಮಹಿಳೆ, ಭಾರತದ ವಿಕಾಸದಲ್ಲಿ ಮಹಿಳೆಯರ ಪಾತ್ರ, ವಿಷಯದ ಬಗ್ಗೆ ವಕ್ತಾರರ ಮಾತು ಹಾಗೂ ಚರ್ಚಾಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷೆ ಕಲಾವತಿ ಭಟ್ಟ, ಸಹ ಸಂಯೋಜಕಿ ಸುಜಾತಾ ಶಾನಭಾಗ, ಜಯಾ ಶಾನಭಾಗ, ಸುಕನ್ಯಾ ಗುನಗಾ, ಜಯಲಕ್ಷ್ಮಿ ಹೆಗಡೆ, ವಿದ್ಯಾ ಕಾಮತ್, ಮಿಲನ ರಾಜು ಗುನಗ, ಸ್ವಾತಿ ಬಳಗಂಡಿ ಇತರರು ಇದ್ದರು. ಆರ್.ಎಸ್.ಎಸ್ ಪ್ರಮುಖರಾದ ಹನುಮಂತ ಶಾನಭಾಗ, ಗಿರೀಶ ಭಟ್ಟ ಸಹಕರಿಸಿದರು. ದೇವರಿಗೆ ಪೂಜೆ ಸಲ್ಲಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

Share This
300x250 AD
300x250 AD
300x250 AD
Back to top