ಅಂಕೋಲಾ: ತಾಲೂಕಿನ ಕುಂಬಾರಕೇರಿಯ ಕಂದಬೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ದೀಪೋತ್ಸವ ಎಲ್ಲರ ಗಮನ ಸೆಳೆಯಿತು.
ಮಣ್ಣಿನ ಹಣತೆಯಲ್ಲಿ ಬೆಳಗಿದ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯಿತು. ಮುಖ್ಯ ರಸ್ತೆಯಿಂದ ದೇವಸ್ಥಾನದ ಸುತ್ತುವರಿದ ದೀಪಗಳ ಸಾಲು ನಕ್ಷತ್ರ ಪುಂಜಗಳಂತೆ ಕಂಡು ಬಂದವು. ಆಯೋಜಿಸಿದ ಭಜನಾ ಕಾರ್ಯಕ್ರಮದಲ್ಲಿ ಚಿಣ್ಣರು ದೇವರ ನಾಮಾವಳಿಗಳನ್ನು ಹಾಡಿ ಭಕ್ತಿಯ ಸುಧೆಯುಣಿಸಿದರು.