ಅಂಕೋಲಾ: ಕರ್ನಾಟಕ ಸರ್ಕಾರ ಇತ್ತೀಚೆಗೆ ನಡೆಸಿದ ಉನ್ನತ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ 2023ರಲ್ಲಿ ಕೆಎಲ್ಈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಭ್ಯಸಿಸಿದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಇತ್ತೀಚಿಗೆ ನಡೆಸಿದ ನೇಮಕಾತಿಯಲ್ಲಿ ಸ್ಥಳೀಯ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸುಷ್ಮಾ ಗೌಡ, ಜೀವನ ಶೆಟ್ಟಿ, ನಾಗರಾಜ ನಾಯ್ಕ, ಮಮತಾ ಭಂಡಾರಿ, ತನುಜ ಗುನಗ, ಭಾಗ್ಯಲಕ್ಷ್ಮಿ ನಾಯಕ, ರತ್ನ ನಾಯ್ಕ, ಮಮತಾ ಶಡಗೇರಿ, ಮಂಜುನಾಥ ಬೂತೆ, ಸ್ನೇಹ ಗಾಂವಕರ, ಸಹನ ನಾಯ್ಕ, ವಿದ್ಯಾ ನಾಯಕ, ಮಂಜುಳಾ ಗೌಡ, ವಸಂತ ಬಾಯಿ, ಪ್ರೇಕ್ಷಾ ನಾಯ್ಕ, ಸೌಮ್ಯ ಗಾಂವ್ಕರ, ಮಲ್ಲಿಕಾ ನಾಯ್ಕ, ಶ್ರೀದೇವಿ ಪಟಗಾರ, ಶ್ವೇತಾ ಪಟಗಾರ, ಶಶಿಕುಮಾರ ಹರಿಕಂತ್ರ, ಶಾಂತಲಾ ನಾಯಕ, ನಾಗರಾಜ ಪಟಗಾರ, ಸರ್ವೇಶ್ವರಿ ನಾಯಕ, ಭವ್ಯ ನಾಯ್ಕ, ಸಹನಾ ನಾಯ್ಕ, ನಿಶಾ ಪಡವಳಕರ್, ಗೀತಾ ಚಿನ್ನಿಕಟ್ಟಿ, ರೇಷ್ಮಾ ಅಂಬಿಗ, ಕವಿತಾ ಭಟ್ಟ, ಶ್ಯಾಮಲ ಗೌಡ, ತಿಲಕ ನಾಯ್ಕ, ನಾಗರತ್ನ ಶಡಗೇರಿ, ಪ್ರದೀಪ ಗೌಡ, ಸಂಪೂರ್ಣ ಹಬ್ಬು, ಬಿ.ವಿ.ಕಾವ್ಯ, ಮಾನಸ ಪಟಗಾರ, ಪ್ರಿಯಾ ಪರ್ನಾಂಡಿಸ, ನೇತ್ರಾವತಿ ಗಾoವ್ಕರ ಸೇರಿದಂತೆ 44ಕ್ಕೂ ಅಧಿಕ ವಿದ್ಯಾರ್ಥಿಗಳು ನೇಮಕಾತಿ ಹೊಂದಿ, ಸರ್ಕಾರಿ ಸೇವೆಗೆ ಸೇರ್ಪಡೆಗೊಂಡು ಮಹಾವಿದ್ಯಾಲಯಕ್ಕೆ ಹೆಮ್ಮೆ ತಂದಿರುತ್ತಾರೆ.
ಪೂರ್ವ ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ, ಬೀಈಡಿ ವಿಭಾಗದ ಅಧ್ಯಕ್ಷ ಜಯಾನಂದ ಮುನವಳ್ಳಿ ನಿರ್ದೇಶಕ ಬಿ ಆರ್ ಪಾಟೀಲ, ಸದಸ್ಯ ಕಾರ್ಯದರ್ಶಿ ಮಹಾದೇವ ಬಳಿಗಾರ, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಡಿ.ಎಲ್.ಭಟ್ಕಳ, ಸಂಯೋಜಕ ಆರ್. ನಟರಾಜ, ಸದಸ್ಯ ಡಾ. ಮಿನಲ್ ನಾರ್ವೇಕರ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.